ಕೊರೊನಾ ಹೊಡೆತಕ್ಕೆ ಚಿತ್ರರಂಗ ತತ್ತರಿಸಿ ಹೋಗಿದೆ. ನಿರ್ಮಾಪಕರು ಸಿನಿಮಾ ಮೇಲೆ ಹೂಡಿದ ಹಣ ವಾಪಸ್ ಬರುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಮತ್ತೊಂದೆಡೆ ಸಿನಿಮಾ ಮಾಡಲು ಯಾರು ಧೈರ್ಯ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡಿ ಕೋಟ್ಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ.
ಹೌದು..! ಲಾಕ್ ಡೌನ್ ಟೈಂನಲ್ಲೂ ಆರ್ ಜಿವಿ ಸಿನಿಮಾಗಳನ್ನು ನಿರ್ದೇಶಿಸಿ ಆನ್ ಲೈನ್ ನಲ್ಲಿ ರಿಲೀಸ್ ಮಾಡುತ್ತಾ ಹಣಗಳಿಸುತ್ತಿದ್ದಾರೆ. ಮೊನ್ನೆಯಷ್ಟೆ ಮಿಯಾ ಮಾಲ್ಕೊವಾ ಎಂಬ ಪಾರ್ನ್ ಸ್ಟಾರ್ ಅಭಿನಯದ ಕ್ಲೈಮ್ಯಾಕ್ಸ್ ಎಂಬ ಸಿನಿಮಾ ನಿರ್ದೇಶಿಸಿ ಆನ್ಲೈನ್ ಅಲ್ಲಿ ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಒಂದು ಕೋಟಿಗೂ ಅಧಿಕ ಹಣ ಗಳಿಸಿದ್ದರು. ಅದೇ ರೀತಿ ಈಗ ‘ನಗ್ನಂ’ ಎಂಬ ಸಿನಿಮಾ ಬಿಡುಗಡೆ ಮಾಡಿ ಲಕ್ಷಾಂತರ ಹಣ ಗಳಿಸಿದ್ದಾರೆ.
ಜೂನ್ 27 ರಂದು ನಗ್ನಂ ಸಿನಿಮಾವನ್ನು ತಮ್ಮದೇ ಆಪ್ ಹಾಗೀ ವೆಬ್ ಸೈಟ್ ನಲ್ಲಿ ರಾಮ್ ಗೋಪಾಲ್ ವರ್ಮಾ ರಿಲೀಸ್ ಮಾಡಿದ್ದರು. ಹಾಗೇ ಆ ಸಿನಿಮಾವನ್ನು ನೋಡಲು ವೀಕ್ಷಕರು 200 ರೂಪಾಯಿ ಪಾವತಿಸುವಂತೆ ವ್ಯವಸ್ಥೆ ಮಾಡಿದ್ದರು.
ಇನ್ನು ಈ ಸಿನಿಮಾ ಆನ್ ಲೈನ್ ನಲ್ಲಿ ಬಿಡುಗಡೆ ಆದ ಅರ್ಧ ಗಂಟೆಯಲ್ಲಿ 23,560 ಮಂದಿ ‘ನಗ್ನಂ’ ಚಿತ್ರ ನೋಡಿದ್ದಾರೆ. ಅಲ್ಲಿಗೆ ಕೇವಲ ಅರ್ಧ ಗಂಟೆಯಲ್ಲಿ ರಾಮ್ ಗೋಪಾಲ್ ವರ್ಮಾ 47,12,000 ಹಣ ಗಳಿಸಿದ್ದಾರೆ. ಈ ಬಗ್ಗೆ ಅವರೇ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೇ ಸಿನಿಮಾ ಬಿಡುಗಡೆ ಆದ 20 ಗಂಟೆಯಲ್ಲಿ 35,445 ಮಂದಿ ಸಿನಿಮಾವನ್ನು ಹಣ ಕೊಟ್ಟು ನೋಡಿದ್ದು, ಬರೋಬ್ಬರಿ 70.89 ಲಕ್ಷ ರೂ. ಜೇಬಿಗಿಳಿಸಿಕೊಂಡಿದ್ದಾರೆ ಆರ್ ಜಿವಿ.