Shraddha Murder Case : ಪಾಲಿಗ್ರಾಫಿ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಅಫ್ತಾಬ್
ದೇಶವನ್ನೇ ಬೆಚ್ಚಿಬೀಳಿಸಿರುವ ಶ್ರದ್ಧಾ ವಾಕರ್ ಹತ್ಯಾ ಪ್ರಕರಣದ ಆರೋಪಿ ಅಫ್ತಾಬ್ ನನ್ನ ಇತ್ತೀಚೆಗೆ ಪಾಲಿಗ್ರಾಫಿ ಪರೀಕ್ಷೆಗೆ ಒಳಪಡಿಸಲಾಗಿತ್ತು..
ಆಕೆಯನ್ನ ಕೊಂದಿದ್ದಾಗಿ ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ.. ಜೊತೆಗೆ ಕೊಲೆಯ ಬಗ್ಗೆಗಿನ ಮಾಹಿತಿಯನ್ನ ಅಧಿಕಾರಿಗಳ ಎದುರು ಬಿಚ್ಚಿಟ್ಟಿದ್ದಾನೆ ಎಂದು FSL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..
ಕೋರ್ಟ್ ಅನುಮತಿ ಮೇರೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ.. ಅಷ್ಟೇ ಅಲ್ಲ ನನಗೆ ಪಶ್ಚಾತಾಪ ಇಲ್ಲವೆಂದು ಹೇಳಿದ್ದಾನೆ..
ಮೇ 18 ರಂದು ಶ್ರದ್ಧಾಳ ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 3 ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ ಬಳಿಕ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಕಾಡಿನಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.