Shraddha Walkar : ಶ್ರದ್ಧಾ ವಾಕರ್ ಹತ್ಯೆ ಪ್ರಕರಣ; 3000 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿದ ಪೊಲೀಸರು…
ಕಳೆದ ವರ್ಷ ದೆಹಲಿಯಲ್ಲಿ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದೆ. ತನಿಖೆ ಪೂರ್ಣಗೊಳಿಸಿದ ದೆಹಲಿ ಪೊಲೀಸರು 3,000 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿದ್ದಾರೆ.
ತನಿಖೆಯ ಭಾಗವಾಗಿ ಸುಮಾರು 100 ಸಾಕ್ಷಿಗಳ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಪೊಲೀಸರು ಚಾರ್ಜ್ ಶೀಟ್‌ನಲ್ಲಿ ವಿಧಿವಿಜ್ಞಾನ ವರದಿ, ಎಲೆಕ್ಟ್ರಾನಿಕ್ ಮತ್ತು ವೈಜ್ಞಾನಿಕ ಪುರಾವೆಗಳನ್ನ ಸೇರಿಸಿದ್ದಾರೆ.
ಶ್ರದ್ಧಾ ಹತ್ಯೆಯ ಬಳಿಕ ದೆಹಲಿಯ ಸುತ್ತಮುತ್ತ ಪೊಲೀಸರು ಸಂಗ್ರಹಿಸಿದ ಮೂಳೆಗಳು ಶ್ರದ್ಧಾ ಅವರದೇ ಎಂಬುದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಎಲ್ಲ ವಿವರಗಳಿರುವ ಆರೋಪ ಪಟ್ಟಿಯನ್ನು ಈ ತಿಂಗಳ ಕೊನೆಯ ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಪ್ರಸ್ತುತ, ಕಾನೂನು ತಜ್ಞರು ಈ ಚಾರ್ಜ್ ಶೀಟ್ ಗೆ ಸಂಬಂಧಿಸಿದ ವಿಷಯಗಳನ್ನ ಪರಿಶೀಲಿಸುತ್ತಿದ್ದಾರೆ.
ಶ್ರದ್ಧಾ ವಾಕರ್ ಮತ್ತು ಆಕೆಯ ಗೆಳೆಯ ಅಫ್ತಾದ್ ಪೂನಾವಾಲಾ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಶ್ರದ್ಧಾ ತಂದೆ ವಿರೋಧಿಸಿದ್ದರಿಂದ ದೆಹಲಿಯ ಛತ್ತರ್‌ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ಶ್ರದ್ಧಾ-ಅಫ್ತಾಬ್ ಭೇಟಿಯಾಗುತ್ತಿದ್ದರು.
ಅಫ್ತಾದ್ ಪೂನಾವಾಲಾ ಕಳೆದ ವರ್ಷ ಮೇ 18 ರಂದು ಶ್ರದ್ಧಾ ವಾಕರ್ ಳನ್ನ ಕೊಂದು. ನಂತರ ಆಕೆಯ ದೇಹದ ಭಾಗಗಳನ್ನ ತುಂಡು ತುಂಡಾಗಿ ಕತ್ತರಿಸಿ ದಿಲ್ಲಿಯ ಹೊರಹೊಲಯದ ಕಾಡುಗಳಲ್ಲಿ ಎಸೆದಿದ್ದ. ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅಫ್ತಾಬ್‌ನನ್ನ ವಶಕ್ಕೆ ಪಡೆದ ನಂತರ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸಿದರು. ಪಾಲಿಗ್ರಾಫ್ ಪರೀಕ್ಷೆ ಮತ್ತು ನಾರ್ಕೋ ವಿಶ್ಲೇಷಣೆ ಪರೀಕ್ಷೆಯನ್ನು ನಡೆಸಲಾಯಿತು.
Shraddha Walker : Shraddha Walker murder case; Police prepared a 3000-page charge sheet…








