Virat ಕೊಹ್ಲಿ ದಾಖಲೆ ಉಡೀಸ್ ಮಾಡಿದ ಶ್ರೇಯಸ್
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅಪರೂಪದ ದಾಖಲೆ ಬರೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅಯ್ಯರ್ 204 ರನ್ ಗಳಿಸಿದ್ದಾರೆ.
ಆ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನ ಮುರಿದಿದ್ದಾರೆ.
2016ರಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ 199 ರನ್ ಗಳಿಸಿದ್ದರು.
ಇದೀಗ ಶ್ರೇಯಸ್ ಅಯ್ಯರ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 204 ರನ್ ಗಳಿಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.
ಲಂಕಾ ವಿರುದ್ಧದ ಮೂರು ಮ್ಯಾಚ್ ಗಳ ಸರಣಿಯ ಮೊದಲ ಪಂದ್ಯದಲ್ಲಿ ಅಯ್ಯರ್, 28 ಎಸೆತಗಳಲ್ಲಿ 57 ರನ್, ಎರಡನೇ ಪಂದ್ಯದಲ್ಲಿ 44 ಎಸೆತಗಳಲ್ಲಿ 74 ಮತ್ತು ಮೂರನೇ ಪಂದ್ಯದಲ್ಲಿ 45 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗುಳಿದರು.
ಇದರೊಂದಿಗೆ ಕೊಹ್ಲಿ (2012, 2014, 2016) ಹ್ಯಾಟ್ರಿಕ್ ಅರ್ಧ ಶತಕ. ರೋಹಿತ್ ಶರ್ಮಾ (2018) ಮತ್ತು ಕೆಎಲ್ ರಾಹುಲ್ (2018, 2021) ನಂತರ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
Shreyas-iyer-breaks- virat-kohli huge-record