Shreyas iyer | ಶ್ರೇಯರ್ ಅಯ್ಯರ್ ಖಾತೆಗೆ ಬೇಡವಾದ ದಾಖಲೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಲೀಡಿಂಗ್ ಸ್ಥಾನದಲ್ಲಿದೆ. ಲಂಕಾ ತಂಡವನ್ನು 109 ರನ್ ಗಳಿಗೆ ಕಟ್ಟಿ ಹಾಕಿ 143 ರನ್ ಗಳೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದೆ.
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 252 ರನ್ ಗಳಿಸಿ ಆಲೌಟ್ ಆಗಿತ್ತು. ಭಾರತದ ಈ ಸ್ಕೋರ್ ನಲ್ಲಿ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರದ್ದು ಸಿಂಹಪಾಲಿದೆ. ಶ್ರೇಯಸ್ ಅಯ್ಯರ್ 98 ಎಸೆತಗಳಲ್ಲಿ 92 ರನ್ ಗಳಿಸಿದ್ದರು.
ಸ್ಪಿನ್ನರ್ ಗಳ ವಿರುದ್ಧ ರೊಚ್ಚಿಗೆದ್ದು ಬ್ಯಾಟ್ ಬೀಸಿದ ಅಯ್ಯರ್, 54 ಎಸೆತಗಳಲ್ಲಿ ಎರಡು ಬೃಹತ್ ಸಿಕ್ಸರ್‌ಗಳೊಂದಿಗೆ ಅರ್ಧಶತಕ ಪೂರೈಸಿದರು.
ಆದರೆ ಅಯ್ಯರ್ 92 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾಗ ಸ್ಟಂಪೌಟ್ ರೂಪದಲ್ಲಿ ಪೆವಿಲಿಯನ್ ಸೇರಿದರು.
ಇದರೊಂದಿಗೆ ಅಯ್ಯರ್ ಅನಗತ್ಯ ದಾಖಲೆಯ ಪಟ್ಟಿ ಸೇರಿದ್ದಾರೆ. ಟೆಸ್ಟ್‌ನಲ್ಲಿ 90 ರನ್ ಗಳಿಸಿದ ನಂತರ ಸ್ಟಂಪ್ ಔಟ್ ನಾಲ್ಕನೇ ಭಾರತೀಯ ಆಟಗಾರ ಶ್ರೇಯಸ್ ಅಯ್ಯರ್.
ಇದಕ್ಕು ಮುನ್ನ ಭಾರತದ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ದಿಲೀಪ್ ವೆಂಗ್‌ಸರ್ಕರ್ 90ರ ಗಡಿಯಲ್ಲಿ ಸ್ಪಂಪೌಟ್ ಆಗಿದ್ದರು.
2001ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸಚಿನ್ 90 ರನ್ ಗಳಿಸಿದ್ದರು. ನಾಸಿರ್ ಹುಸೇನ್ ಬೌಲಿಂಗ್‌ನಲ್ಲಿ ಸ್ಟಂಪ್ ಆಗಿದ್ದರು.
2010ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಸೆಹ್ವಾಗ್ 99 ರನ್ ಗಳಿಸಿ ಸ್ಟಂಪ್ ಆಗಿದ್ದರು. 1987ರಲ್ಲಿ ಪಾಕಿಸ್ತಾನದ ವಿರುದ್ಧ ವೆಂಗ್‌ಸರ್ಕರ್ 96 ರನ್‌ಗಳಿಗೆ ಸ್ಟಂಪ್ ಆಗಿದ್ದರು.