ಪಟೇಲನಾದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್.
ಬಹುಶಃ ಶ್ರೇಯರ್ ಅಯ್ಯರ್ ಈ ರೀತಿಯ ಅಭಿಮಾನವನ್ನು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ದೆಹಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಸುಮಾರು ಐದು ವರ್ಷ ಆಡಿರಬೇಕು. ತಂಡದ ನಾಯಕನಾಗಿ ಫೈನಲ್ ಹಂತವನ್ನು ಪ್ರವೇಶಿಸಿದ್ದಾನೆ. ಹಾಗೇ ಕೆಕೆಆರ್ ತಂಡಕ್ಕೆ ಪ್ರಶಸ್ತಿಯನ್ನು ಗೆಲ್ಲಿಸಿಕೊಟ್ಟಿದ್ದಾನೆ. ಆದ್ರೆ ಆ ಎರಡು ಪ್ರಾಂಚೈಸಿಗಳು ಅಯ್ಯರ್‌ನನ್ನು ಸರಿಯಾಗಿ ನಡೆಸಿಕೊಂಡಿಲ್ಲ.
ಹೀಗಾಗಿಯೇ ಅಯ್ಯರ್ ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದಾನೆ. ಅಲ್ಲದೆ ಮುಂಚೂಣಿಯಲ್ಲಿ ನಿಂತುಕೊAಡು ೧೪ ವರ್ಷಗಳ ಬಳಿಕ ತಂಡವನ್ನು ಫೈನಲ್ ನಲ್ಲಿ ಆಡುವಂತೆ ಮಾಡಿದ್ದಾನೆ.
ಶ್ರೇಯಸ್ ಅಯ್ಯರ್‌ನ ನಾಯಕತ್ವ, ಆಡುವ ರೀತಿ, ಬದ್ಧತೆ ಹಾಗೂ ತಂಡವನ್ನು ಒಗ್ಗಟ್ಟಿನಿಂದ ಮುನ್ನಡೆಸಿಕೊಂಡು ಹೋಗುವ ರೀತಿಗೆ ಪಂಜಾಬ್ ಕಿಂಗ್ಸ್ ತಂಡದ ಮ್ಯಾನೇಜ್‌ಮೆಂಟ್ ಫುಲ್ ಫಿದಾ ಆಗಿಬಿಟ್ಟಿದೆ. ಅಷ್ಟೇ ಅಲ್ಲ ಪಂಜಾಬ್ ಕಿಂಗ್ಸ್ ತಂಡದ ಅಭಿಮಾನಿಗಳ ಪ್ರೀತಿಯ ಕಣ್ಮನಿಯಾಗಿದ್ದಾನೆ.
ಅದಕ್ಕಾಗಿಯೇ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಶ್ರೇಯಸ್ ಅಯ್ಯರ್‌ನನ್ನು ಪಟೇಲ ಎಂದು ಕರೆಯುತ್ತಿದ್ದಾರೆ. ನಾಯಕತ್ವದ ಮೊದಲ ಸೀಸನ್‌ನಲ್ಲಿ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದು ಪಂಜಾಬ್ ಕಿಂಗ್ ಅಭಿಮಾನಿಗಳ ಹೃದಯದಲ್ಲಿ ಅಯ್ಯರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಯ್ಯರ್ ಕೂಡ ಹೇಳಿಕೊಂಡಿರುವುದು ಹೀಗೆ. ನನಗೆ ಈ ಬಗ್ಗೆ ಸ್ವಲ್ಪನೂ ಐಡಿಯಾನೂ ಇಲ್ಲ. ಈ ಕ್ಲೂö್ಯ ಕೂಡ ಇಲ್ಲ. ಆದ್ರೆ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಮತ್ತು ಮ್ಯಾನೇಜ್‌ಮೆಂಟ್ ನನಗೆ ಹೊಸ ನಿಕ್ ನೇಮ್ ಇಟ್ಟಿದ್ದಾರೆ. ಈ ನಿಕ್‌ನೇಮ್ ಬಗ್ಗೆ ನನಗೆ ಹೆಮ್ಮೆ ಇದೆ ಅಂತ ಅಯ್ಯರ್ ಹೇಳಿಕೊಂಡಿದ್ದಾರೆ.
ನಾನು ಪಂಜಾಬ್‌ನಲ್ಲಿ ಎಲ್ಲೇ ಹೋದ್ರೂ ಪಟೇಲ ಅಂತ ಕರೆಯುತ್ತಿದ್ದಾರೆ. ನನಗೆ ಒಂದು ಕಡೆ ಆಶ್ಚರ್ಯವೂ ಆಗುತ್ತಿದೆ. ಮೈದಾನಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಹುಡುಗರು ಕೂಡ ಪಟೇಲ ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲ, ಈ ವರ್ಷ ಟ್ರೋಫಿ ಗೆದ್ರೆ ರಸ್ತೆಗೆ ಶ್ರೇಯಸ್ ಅಯ್ಯರ್ ಹೆಸರು ನಾಮಕರಣ ಮಾಡುವುದಾಗಿ ಹೇಳುತ್ತಿದ್ದರು. ಈ ವಿಷ್ಯವನ್ನು ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ವಿಡಿಯೋ ಸಮೇತ ಟ್ಯಾಗ್ ಮಾಡಿದೆ.
ಒಟ್ಟಿನಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡದ ಮಾನಸ ಪುತ್ರನಾಗಿದ್ದಾನೆ. ಈಗಾಗಲೇ ಮೂರು ಫ್ರಾಂಚೈಸಿಗಳ ನಾಯಕನಾಗಿ ತಂಡವನ್ನು ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾನೆ. ದೆಹಲಿ ರನ್ನರ್ ಅಪ್ ಆದ್ರೆ, ಕೆಕೆಆರ್ ಪ್ರಶಸ್ತಿ ಗೆದ್ದುಕೊಂಡಿದೆ. ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಸ್ವಲ್ಪ ಸಮಯ ಕಾದು ನೋಡೋಣ.








