ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಯಮಕನಮರಡಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಬರುವ ಹೊಸ ವಂಟಮುರಿ ಗ್ರಾಮದ ಪಂಚಾಯತಿಯಲ್ಲಿ ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಚರ್ಚಿಸಲು ಗ್ರಾಮದ ಮುಖಂಡರು, ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಸಭೆ ನಡೆಸಿ,ಮಾಹಿತಿ ಪಡೆದುಕೊಂಡರು.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ, ಯವರ ನೇತೃತ್ವದ ಕೇಂದ್ರ ಸರ್ಕಾರ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆಯನ್ನು ದೊರಕಿಸಿಕೊಡಲು ಇ-ಮಂಡಿಗಳು ಕ್ರಿಯಾಶೀಲವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಶಶಿಕಾಂತ ನಾಯಕ ಜಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೇಂದ್ರ ನೇರ್ಲಿ ಜಿ, ಉಪ ತಹಶೀಲ್ದಾರ್ ಶ್ರೀ ರಾಕೇಶ ಭೂವಾ, ಸಿಪಿಐ ಶ್ರೀ ಕೌಜಲಗಿ, ಸಿಡಿಪಿಓ ಶ್ರೀಮತಿ ರೇವತಿ ಹೊಸಮಠ, ಶ್ರೀ ಮಾರುತಿ ಅಷ್ಟಗಿ, ಶ್ರಿ ರವಿ ಹಿರೇಮಠ, ಶ್ರೀ ರವಿ ಹಂಜಿ, ಮಂಡಲ ಅಧ್ಯಕ್ಷ ಶ್ರೀ ಶ್ರೀಶೈಲ ಯಮಕನಮರಡಿ ಹಾಗೂ ಅನೇಕ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.