ರಾಷ್ಟ್ರಪತಿ ಭವನದಿಂದ ಶ್ರಿಲಂಕಾ ಅಧ್ಯಕ್ಷ ಪರಾರಿ
ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರು
ದಂಗೆಯ ಭಯದಿಂದ ಪರಾರಿಯಾದ ಗೋತಬಯ ರಾಜಪಕ್ಸೆ
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಲಂಕಾ
ಲಂಕಾ ಪರಿಸ್ಥಿತಿಗೆ ರಾಜಪಕ್ಸೆಯನ್ನ ಹೊಣೆಯಾಗಿಸಿ ಪ್ರತಿಭಟನೆ
ಶ್ರೀಲಂಕಾ : ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಜನರು ಹಿಂಸಾಚಾರಕ್ಕೆ ಇಳಿದಿದ್ದಾರೆ.. ಪ್ರತಿಭಟನಾಕಾರರು ರಾಷ್ಟ್ರಪತಿ ಭವನವನ್ನು ಸುತ್ತುವರಿದ ಕೂಡಲೇ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ರಾಷ್ಟ್ರಪತಿ ಭವನದಿಂದ ಫಲಾಯನ ಮಾಡಿದ್ದಾರೆ.. ರಾಜಪಕ್ಸೆ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸಿ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದರು..
ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು, ಶೆಲ್ ದಾಳಿ ನಡೆಸಿದ್ದಾ. ಆದ್ರೂ ಕೂಡ ಪ್ರತಿಭಟನಾಕಾರರು ಹಿಂದೆ ಸರಿದಿಲ್ಲ.. ಬ್ಯಾರಿಕೇಡ್ ಮುರಿದು ರಾಷ್ಟ್ರಪತಿ ಭವನ ಪ್ರವೇಶಿಸಿದರು. ಆರ್ಥಿಕ ಬಿಕ್ಕಟ್ಟಿಗೆ ಗೋತಬಯ ರಾಜಪಕ್ಸೆ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.. ಮತ್ತು ಮೂರು ತಿಂಗಳ ಕಾಲ ಅವರ ಕಚೇರಿಯ ಪ್ರವೇಶದ್ವಾರವನ್ನು ಆಕ್ರಮಿಸಿಕೊಂಡಿದ್ದಾರೆ.
ತೀವ್ರ ಇಂಧನ ಕೊರತೆಯಿಂದಾಗಿ ಶ್ರೀಲಂಕಾದಲ್ಲಿ ಸಾಕಷ್ಟು ಸಮಸ್ಯೆಗಳೆದುರಾಗಿದೆ.. ಎಲ್ಲಾ ಅಗತ್ಯ ವಸ್ತುಗಳು ಗಗನಕ್ಕೇರಿದೆ.. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾಋಎ..
ದೇಶದ ಆರ್ಥಿಕತೆ ಕುಸಿದಿದೆ ಎಂದು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಕಳೆದ ತಿಂಗಳು ಹೇಳಿರುವುದು ನಮಗೆ ಗೊತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆಗಿನ ಸರ್ಕಾರದ ಮಾತುಕತೆಗಳು ಜಟಿಲವಾಗಿದೆ, ಏಕೆಂದರೆ ಅದು ಈಗ ದಿವಾಳಿಯಾದ ದೇಶದ ಪಟ್ಟಿಗೆ ಪ್ರವೇಶಿಸುತ್ತಿದೆ..
ಗಂಭೀರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಪ್ರತಿಭಟನಾಕಾರರು ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ನಿವಾಸವನ್ನು ಸುತ್ತುವರೆದಿರುವ ವರದಿಗಳು ಬರುತ್ತಿವೆ. ರಾಜಪಕ್ಸೆ ಮನೆಯಿಂದ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಸಮಯದ ಹಿಂದೆ, ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಭಾರೀ ಕೋಲಾಹಲದ ನಡುವೆ ರಾಜೀನಾಮೆ ನೀಡಿದಾಗ, ಬೆಂಕಿ ಮತ್ತು ಹಿಂಸಾತ್ಮಕ ಪ್ರತಿಭಟನಾಕಾರರನ್ನು ತಪ್ಪಿಸಲು ಅವರು ತಮ್ಮ ಕುಟುಂಬದೊಂದಿಗೆ ಮನೆಯಿಂದ ಓಡಿಹೋಗಬೇಕಾಯಿತು.
ಪ್ರತಿಭಟನಾಕಾರರನ್ನು ತಡೆಯಲು ವೈಮಾನಿಕ ಗುಂಡಿನ ದಾಳಿಯನ್ನೂ ನಡೆಸಲಾಗಿದೆ..
ದಿನೇ ದಿನೇ ರಾವಣನ ನಾಡು ಲಂಕಜಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ..