800 ವರ್ಷಗಳ ಪರಂಪರೆಯ ತಮ್ಮ ಮನೆಯ ಫೋಟೋ ಹಂಚಿಕೊಂಡ ಶುಭಾ..!!
ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಶುಭಾ ಪುಂಜಾ ಸಿನಿಮಾಗಳಿಗಿಂತಲೂ ಹೆಚ್ಚು ಫೇಮಸ್ ಆಗಿದ್ದು ಮಾತ್ರ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ..
ಹೌದು ಬಿಗ್ ಬಾಸ್ ಕನ್ನಡದ ಸೀಸನ್ 8 ರಲ್ಲಿ ಶುಭಾ ಒನ್ ಆಫ್ ದ ಫೇವರೇಟ್ ಕಂಟೆಸ್ಟೆಂಟ್ ಆಗಿದ್ದರು.. ಅವರ ವ್ಯಕ್ತಿತ್ವ , ಮೃದು ಸ್ವಭಾವ , ಕ್ಯೂಟ್ ಅವತಾರ ಜನರಿಗೆ ಬಹಳ ಹಿಡಿಸಿತ್ತು.. ಅಷ್ಟೇ ಅಲ್ದೇ ಯಾವ ಸ್ಪರ್ಧಿಗಳ ಜೊತೆಗೂ ಅಷ್ಟಾಗಿ ಶುಭಾ ಕಿರಿಕ್ ಮಾಡಿಕೊಳ್ತಿರಲಿಲ್ಲ.. ಬದಲಾಗಿ ಶುಭಾರನ್ನ ಎಲ್ಲರೂ ಇಷ್ಟಪಡ್ತಿದ್ದರು..
ಸದ್ಯ ಶುಭಾ ಬಿಗ್ ಬಾಸ್ ಮೂಲಕವೇ ಹೆಚ್ಚು ಅಭಿಮಾನಿಗಳನ್ನ ಗಳಿಸಿದ್ದಾರೆ.. ಇತ್ತೀಚೆಗಷ್ಟೇ ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆಗೆ ಶುಭಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭಾ ಪುಂಜಾ ತಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ತಮ್ಮ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದರು.. ತಮ್ಮ ಮದುವೆಯ ಒಂದಷ್ಟು ಫೋಟೋಗಳನ್ನೂ ಶೇರ್ ಮಾಡಿದ್ದರು.. ಅಭಿಮಾನಿಗಳು , ಸೋಷಿಯಲ್ ಮೀಡಿಯಾ ಮೂಲಕ ಶುಭಾಗೆ ವಿಶ್ ಮಾಡಿದ್ದರು..
ಆದ್ರೆ ಶುಭಾ ಮದುವೆಯಾದ ನಂತರ ಅವರು ಶೇರ್ ಮಾಡಿರುವ ಫೋಟೋಗಳಲ್ಲಿ ಹಿನ್ನೆಯಲ್ಲಿ ಕಾಣುವ ಸುಂದರ ಮನೆ ಅದರ ಸುತ್ತ ಮನಮೋಹಕ ನೋಟ ನೆಟ್ಟಿಗರ ಮನಸೆಳೆದಿದೆ.. ಹೀಗಾಗಿ ಅನೇಕರು ಶುಭಾಗೆ ಆ ಮನೆ ಬಗ್ಗೆ ಪ್ರಶ್ನೆಗಳನ್ನ ಮಾಡಿದ್ದಾರೆ.. ಕುತೂಹಲ ಹೊರಹಾಕಿದ್ದಾರೆ.. ಇದೀಗ ತಮ್ಮ ಮನೆಯ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡು ಶಾರ್ಟ್ ಅಂಡ್ ಸ್ವೀಟ್ ಆಗಿ ಮಾಹಿತಿ ನೀಡಿದ್ದಾರೆ ಶುಭಾ..
ನನ್ನ ಮನೆ ಮಜಲಬೆಟ್ಟುಬೀಡು. ನಾನು ಮದುವೆಯಾದ ಮನೆಯನ್ನು ತೋರಿಸುವಂತೆ ಸಾಕಷ್ಟು ಜನ ಕೇಳಿದ್ದರು. ಇದು ನನ್ನ ಅಜ್ಜಿಯ ಮನೆ. ಇದು 800 ವರ್ಷಗಳ ಪರಂಪರೆ ಹೊಂದಿರುವ ಮನೆಯಾಗಿದೆ. ಈ ಮನೆಯಲ್ಲಿಯೇ ನಾನು ಬೆಳೆದಿದ್ದು, ನಾನು ಯಾವಾಗಲೂ ಈ ಮನೆಯಲ್ಲಿಯೇ ಮದುವೆಯಾಗಬೇಕೆಂದು ಅಂದುಕೊಂಡಿದ್ದೆ ಎಂದು ಬರೆದುಕೊಂಡಿದ್ದಾರೆ.