ಶರ್ದೂಲ್ ಠಾಕೂರ್ ಗೆ ಚಾನ್ಸ್ ನೀಡಲೇಬೇಕು.. Shurdul Thakur saaksha tv
ದಕ್ಷಿಣಾ ಆಫ್ರಿಕಾ ಟೆಸ್ಟ್ ಸರಣಿಗೆ ಸ್ಟಾರ್ ಓಪನರ್ ರೋಹಿತ್ ಶರ್ಮಾ, ಆಲ್ ರೌಂಡರ್ ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಲ್ ರೌಂಡರ್ ಶರ್ದೂಲ್ ಠಾಕೂರ್ ಗೆ ನೂರಕ್ಕೆ ನೂರು ಅವಕಾಶ ಸಿಗಲೇಬೇಕು ಎಂದು ಭಾರತ ತಂಡ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗರ್ ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ ಹನ್ನೊಂದರಲ್ಲಿ “ಶಾರ್ದೂಲ್ ಠಾಕೂರ್‌ಗೆ ಖಂಡಿತವಾಗಿಯೂ ಸ್ಥಾನ ಸಿಗುತ್ತದೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ಭಾರತ ಸಾಧಿಸಿದ ಪ್ರತಿ ಐತಿಹಾಸಿಕ ಜಯದಲ್ಲಿ ಶರ್ದೂಲ್ ಪಾತ್ರ ಪ್ರಮುಖವಾಗಿದೆ.
ಮುಖ್ಯವಾಗಿ ಶರ್ದೂಲ್ ಠಾಕೂರ್ ವಿದೇಶಿ ಪಿಚ್ ಗಳಲ್ಲಿ ಮಿಂಚಬಲ್ಲ ಆಟಗಾರನಾಗಿದ್ದಾನೆ. ಆಫ್ರಿಕಾದಂತಹ ಬೌನ್ಸಿ ಪಿಚ್ ಗಳಲ್ಲಿ ಠಾಕೂರ್, ಬೌಲಿಂಗ್ ಜೊತೆಗೆ ಉತ್ತಮವಾಗಿ ಬ್ಯಾಟ್ ಬೀಸಬಲ್ಲನು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಸರಣಿಯಲ್ಲಿ ಭಾರತಕ್ಕೆ ಠಾಕೂರ್ ರಂತಹ ಆಟಗಾರ ತುಂಬಾ ಅವಶ್ಯಕ. ಇಂಗ್ಲೆಂಡ್ ನೆಲದಲ್ಲಿ ಭಾರತ ಗೆಲುವಿನ ಕೇಕೆ ಹಾಕಿದ್ದಾಗ ಆ ಸರಣಿಯಲ್ಲಿ ಶರ್ದೂಲ್ ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದರು ಎಂದು ಇಂಗ್ಲೆಂಡ್ ವಿರುದ್ಧ ಶರ್ದೂಲ್ ಆಟವನ್ನು ಸಂಜಯ್ ಸ್ಮರಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಸಾಧಾರಣವಾಗಿ ವಿದೇಶದಲ್ಲಿ ನಾಲ್ವರು ಫಾಸ್ಟ್ ಬೌಲರ್‌ಗಳು, ಒಬ್ಬ ಸ್ಪಿನ್ನರ್ ಪ್ಲಾನ್ ನೊಂದಿಗೆ ಕಣಕ್ಕಿಳಿಯುತ್ತಾರೆ. ಹೀಗಾಗಿ ಕೊಹ್ಲಿ ರಣತಂತ್ರದಲ್ಲಿ ಶರ್ದೂಲ್ ಪಾತ್ರ ಪ್ರಮುಖವಾಗಿರುತ್ತದೆ ಎಂದು ಬಂಗಾರ್ ಅಭಿಪ್ರಾಯಟ್ಟಿದ್ದಾರೆ.