Minister Sunil Kumar | ಸುನಿಲ್ ಕುಮಾರ್ ಗೆ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಸಲಹೆ
ಬೆಂಗಳೂರು : ಅವಾಸ್ತವಿಕ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದದಿಂದಾಗಿ ರಾಜ್ಯಕ್ಕೆ 2000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿರುವ ಸಚಿವ ಸುನಿಲ್ ಕುಮಾರ್ ಅವರೇ, ನಿಮ್ಮ ಪಕ್ಷ ಅಧಿಕಾರದಲ್ಲಿರುವ ಗುಜರಾತ್ ರಾಜ್ಯವು ವಿದ್ಯುತ್ ಖರೀದಿಗೆ ಯಾವ ದರ ನಿಗದಿಪಡಿಸಿದೆ ಎನ್ನುವುದನ್ನೂ ತಿಳಿಸಿ ಬಿಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11 ರಿಂದ 13,000 ಮೆ.ವ್ಯಾ. ಮಳೆಗಾಲದಲ್ಲಿ 8 ರಿಂದ 9,000 ಮೆ. ವ್ಯಾ. ಸುನಿಲ್ ಕುಮಾರ್ ಅವರೇ, ಉಳಿಕೆಯಾಗುವ 18 ರಿಂದ 20 ಸಾವಿರ ಮೆ. ವ್ಯಾ ವಿದ್ಯುತ್ ಮಾರಾಟಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? Siddaramaiah advises Sunil Kumar on Twitter
ಪೊಳ್ಳು ವಾದದ ಮೂಲಕ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಹೋಗದೆ, ಸಂಪನ್ಮೂಲ ಸೋರಿಕೆಗೆ ತಡೆ, ಹೆಚ್ಚುವರಿ ವಿದ್ಯುತ್ ಮಾರಾಟ, ಅಗತ್ಯವಿಲ್ಲದಿದ್ದರೂ ಅದಾನಿ ಪವರ್ಸ್ ಸೇರಿದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಒಪ್ಪಂದದ ರದ್ದತಿಯೂ ಸೇರಿದಂತೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ @karkalasunil.
10/10#ಇಂಧನಇಲಾಖೆ— Siddaramaiah (@siddaramaiah) September 7, 2022
ಗುಜರಾತ್ ರಾಜ್ಯವೂ ಸೇರಿದಂತೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಸುನಿಲ್ ಕುಮಾರ್ ಅವರನ್ನು ಆಗ್ರಹಿಸುತ್ತೇನೆ.
ಸಚಿವ ಸುನಿಲ್ ಕುಮಾರ್ ಅವರೇ, ಜನರಿಗೆ ಹೆಚ್ಚು ಹೊರೆ ಬೀಳದಂತೆ ವಿದ್ಯುತ್ ಇಲಾಖೆಯನ್ನು ಲಾಭದಾಯಕವಾಗಿ ಮಾಡುವ ಯೋಚನೆ ನಿಮಗಿದ್ದರೆ ನಾನು ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ವಿವರವಾಗಿ ನೀಡಿದ್ದ ಸಲಹೆಗಳನ್ನು ಅಧ್ಯಯನ ಮಾಡಿ, ಜಾರಿಗೆ ತರುವ ಧೈರ್ಯ ಮಾಡಿ.
ಪೊಳ್ಳು ವಾದದ ಮೂಲಕ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಹೋಗದೆ, ಸಂಪನ್ಮೂಲ ಸೋರಿಕೆಗೆ ತಡೆ, ಹೆಚ್ಚುವರಿ ವಿದ್ಯುತ್ ಮಾರಾಟ, ಅಗತ್ಯವಿಲ್ಲದಿದ್ದರೂ ಅದಾನಿ ಪವರ್ಸ್ ಸೇರಿದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಒಪ್ಪಂದದ ರದ್ದತಿಯೂ ಸೇರಿದಂತೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಸುನಿಲ್ ಕುಮಾರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
Siddaramaiah advises Sunil Kumar on Twitter