ಸಿ.ಟಿ.ರವಿ ಸಾಮಾಜಿಕ ನ್ಯಾಯದ ವಿರೋಧಿ : ಸಿದ್ದರಾಮಯ್ಯ
ಬೆಂಗಳೂರು : ಸಿ.ಟಿ.ರವಿ ದಲಿತರ ಪರವಾಗಿ ಇರುವವರಲ್ಲ. ಅವರು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ ಐ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದಲ್ಲಿ ಸಿ ಟಿ ರವಿ ಸುಮ್ಮನಿದ್ದಾರೆ..
ಅವರ ಜಿಲ್ಲೆಯಲ್ಲಿ ಘಟನೆ ನಡೆದರೂ ಅವರು ಯಾಕೆ ಪ್ರತಿಕ್ರಿಯೆ ನೀಡಿಲ್ಲ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ದಲಿತರ ವಿರೋಧಿಗಳು. ಅವರು ಯಾವತ್ತು ದಲಿತರ ಪರವಾಗಿದ್ದಾರೆ ಎಂದರು.
ಇನ್ನು ಕೂಡಲೇ ಪಿಎಸ್‍ಐನ ಅರೆಸ್ಟ್ ಮಾಡಬೇಕು. ಅವನನ್ನ ಈಗ ಸಸ್ಪೆಂಡ್ ಮಾಡಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸೋದು ಅಮಾನವೀಯ.
ಅದು ಒಬ್ಬ ಪಿಎಸ್‍ಐ ಮಾಡಿರೋದು ಸರಿಯಲ್ಲ. ರಕ್ಷಣೆ ಕೊಡಬೇಕಾದವರೆ ಈ ರೀತಿ ಮಾಡಿದರೆ ಹೇಗೆ? ಮೊದಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.









