ಸಿದ್ದರಾಮಯ್ಯನವರ ಕಾಲದ್ದೇ ಅತ್ಯಂತ ಕೆಟ್ಟ ಆಡಳಿತ : ಸಿ.ಟಿ.ರವಿ
ಚಿಕ್ಕಮಗಳೂರು : ಸಿದ್ದರಾಮಯ್ಯನವರ ಕಾಲದ್ದೇ ಅತ್ಯಂತ ಕೆಟ್ಟ ಆಡಳಿತ. ಅಂತಹಾ ಕೆಟ್ಟ ಆಡಳಿತ ನಮಗೆ ಕನಸು – ಮನಸಿನಲ್ಲಿಯೂ ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ವೀರಶೈವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯನವರಿಗೆ ಆಡಳಿತ ಎಂದರೆ ಜಾತಿ-ಜಾತಿ ಒಡೆಯುವುದು. ಅವರ ಕಾಲಘಟ್ಟದಲ್ಲಿ ಕಗ್ಗೊಲೆ ಆಗುತ್ತಿತ್ತಲ್ಲಾ, ಎಷ್ಟು ಜನರ ಕೊಲೆ ಆಯ್ತು.
ಆ ಕೊಲೆ ಎಲ್ಲಾ ಆಗುತ್ತಿದ್ದರೆ ಆಡಳಿತ ಅನ್ನಿಸುತ್ತೆ. ಅಂತಹಾ ಕೆಟ್ಟ ಆಡಳಿತ ಕೊಟ್ಟಂತಹಾ ಪರಿಸ್ಥಿತಿ ಇನ್ಯಾವತ್ತು ಬರಬಾರದು. ಆ ಕಾರಣಕ್ಕೆ ಜನ ಅವರನ್ನು ಸೋಲಿಸಿದ್ದು ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಉತ್ತಮ ಆಡಳಿತಕ್ಕೆ ಸಲಹೆ ನೀಡಲಿ. ಅವರ ಆಡಳಿತದ ಕೆಟ್ಟ ಆಡಳಿತವನ್ನೇ ಆಡಳಿತ ಎಂದುಕೊಂಡರೆ ಅದಕ್ಕಿಂತ ಕೆಟ್ಟ ಆಡಳಿತ ಮತ್ತೊಂದು ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದ ಸಿ.ಟಿ.ರವಿ, ವೀರಶೈವ ಲಿಂಗಾಯಿತ ಸಮಾಜ ಒಡೆಯುವ ಕೆಲಸ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಅಲ್ಲದೆ ಡ್ಯೂವ್ ಹೆಸರಲ್ಲಿ ಡಿನೋಟಿಫೈ ಮಾಡಿ ಸಮರ್ಥನೆ ಮಾಡಿಕೊಂಡು ಲೋಕಾಯುಕ್ತವನ್ನು ದುರ್ಬಳಗೊಳಿಸಿ ತನ್ನ ಮೇಲೆ ಬಂದ ಆರೋಪವನ್ನು ಎಸಿಬಿ ರಚಿಸಿ ಮುಚ್ಚಿ ಹಾಕಿದಂತಹಾ ಕೆಟ್ಟ ಆಡಳಿತ ಇನ್ಯಾವತ್ತೂ ಬೇಡ.
ಸಿದ್ದರಾಮಯ್ಯನವರ ಕಾಲದ್ದೇ ಅತ್ಯಂತ ಕೆಟ್ಟ ಆಡಳಿತ. ಅದಕ್ಕಿಂತ ಕೆಟ್ಟ ಆಡಳಿತವನ್ನು ಇನ್ಯಾರು ಕೊಡಲು ಸಾಧ್ಯವಿಲ್ಲ.
ಅಂತಹಾ ಕೆಟ್ಟ ಆಡಳಿತ ನಮಗೆ ಕನಸು-ಮನಸಿನಲ್ಲಿಯೂ ಬೇಡ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
