ಹೆಚ್ ಡಿಕೆ ಸುಳ್ಳುಗಳಿಗೆ ನಾನ್ ರಿಯಾಕ್ಟ್ ಮಾಡಲ್ಲ : ಸಿದ್ದರಾಮಯ್ಯ
ಬೆಂಗಳೂರು : ಧರ್ಮೇಗೌಡ ಆತ್ಮಹತ್ಯೆ ರಾಜಕೀಯ ಕೊಲೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾವುದೇ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ.
ಅವರ ಸುಳ್ಳುಗಳಿಗೆ ನಾನು ಯಾಕೆ ರಿಯಾಕ್ಟ್ ಮಾಡ್ಲಿ ಅಂತ ಪ್ರಶ್ನೆ ಮಾಡಿದರು. ಕುಮಾರಸ್ವಾಮಿ ದುರುದ್ದೇಶಪೂರಿತವಾಗಿ ಮಾತನಾಡ್ತಾರೆ.
ಪರಿಷತ್ ನಲ್ಲಿ ಬಿಜೆಪಿ-ಜೆಡಿಎಸ್ನವರು ಧರ್ಮೇಗೌಡರನ್ನ ಬಲತ್ಕಾರವಾಗಿ ಸಭಾಪತಿ ಪೀಠದಲ್ಲಿ ಕೂರಿಸಿದ್ರು. ಅದು ಅವರಿಗೆ ಇಷ್ಟ ಇರಲಿಲ್ಲ ಎಂದು ಆರೋಪ ಮಾಡಿದ್ರು.
ಇನ್ನು ಧರ್ಮೇಗೌಡರ ಬಗ್ಗೆ ಮಾತನಾಡಿ, ಅವರ ಅಪ್ಪ ಎಸ್ ಆರ್ ಲಕ್ಷ್ಮಯ್ಯ ನನ್ನ ಆಪ್ತ ಸ್ನೇಹಿತರಾಗಿದ್ದರು. ಧರ್ಮೇಗೌಡ ಕೂಡ ನನ್ನ ಆಪ್ತರಾಗಿದ್ದರು.
ತಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ರೈತಪರ, ಜನಪರ ಕಾಳಜಿಯುಳ್ಳ ವ್ಯಕ್ತಿ.
ಅವರ ಅಗಲಿಕೆ ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









