ವಿಜಯಪುರ: ಸದಾ ಕಾಂಟ್ರೋವರ್ಸಿ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿದ್ದರಾಮಯ್ಯ ಯಾಕೋ ಹಾದಿ ಬಿಟ್ಟಿದ್ದಾರೆ. ನಾನು ಗೋಮಾಂಸ ತಿನ್ನುತ್ತೇನೆ. ನನ್ನನ್ನು ಕೇಳುವವರು ಯಾರು ಎಂಬ ಮನಸ್ಥಿತಿ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದೂಗಳಿಗೆ ಅವಮಾನ ಮಾಡಿದರೆ ನಿಮಗೆ ಓಟುಗಳು ಬರುತ್ತವಾ? ಆಯ್ತು, ಮುಂದಿನ ಚುನಾವಣೆಯಲ್ಲಿ ನೋಡೋಣ. ಹಿಂದೂಗಳ ಮತವಿಲ್ಲದೇ ಹೇಗೆ ಆಯ್ಕೆಯಾಗ್ತೀರಿ ನೋಡೋಣ ಎಂದು ಚಾಟಿ ಬೀಸಿದ್ದಾರೆ.
ವಿಧಾನ ಪರಿಷತನಲ್ಲಿ ಉಪಸಭಾಪತಿಯವರನ್ನು ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯ ಕಾಂಗ್ರೆಸ್ ಸದಸ್ಯರ ವರ್ತನೆಯ ಪರ ತೋರಿದ ನಿಲುವಿಗೆ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಕೃಷಿ ಹಾಗೂ ಎಪಿಎಂಸಿ ವಿಧೇಯಕಗಳ ವಿರುದ್ಧ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಹೋರಾಟ ಬೆಂಬಲಿಸಿರುವ ರಾಹುಲ್ ಗಾಂಧಿ ಇಟಲಿಗೆ ಹೋಗಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್, ರಾಹುಲ್ ಗಾಂಧಿ ಅರೆಹುಚ್ಚ. ಬಫೂನ್, ಆತ ರಾಜಕಾರಣಕ್ಕೆ ಅಲ್ಲ, ಪಾರ್ಟಿಮೆಂಟಿನ ಮುಂದೆ ನಿಂತಿರುವ ಕಾರು ಕಾಯಲೂ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಿ
ಮುಂಬರುವ ಜನವರಿ 4 ಮತ್ತು 5 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಶಾಸಕರ ಸಭೆ ಕರೆದಿರುವುದಕ್ಕೆ ಬಸನಗೌಡ ಪಾಟೀಲ ಯತ್ನಾಳ ಬೇಸರ ವ್ಯಕ್ತಪಡಿಸಿದ್ದಾರೆ.
ತಾವು ಕೇಂದ್ರ ಸಚಿವರಾಗಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅನುಸರಿಸುತ್ತಿದ್ದ ಮಾರ್ಗವನ್ನು ರಾಜ್ಯದಲ್ಲಿಯೂ ಸಿಎಂ ಪಾಲಿಸಬೇಕು. ಅಧಿವೇಶನ ಸಂದರ್ಭದಲ್ಲಿ ಪಾರ್ಲಿಮೆಂಟ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇಂದು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಕೇಂದ್ರದ ಮಾದರಿಯಂತೆ ರಾಜ್ಯದಲ್ಲಿಯೂ ವಿಧಾನ ಮಂಡಲ ಅಧಿವೇಶನ ನಡೆಯುವಾಗ ಪ್ರತಿ ಮಂಗಳವಾರ ಶಾಸಕರ ಸಭೆ ಕರೆಯಬೇಕು. ಶಾಸಕರ ಭಾವನೆಗಳನ್ನು ತಿಳಿದುಕೊಳ್ಳಬೇಕು. ವಿಭಾಗವಾರು ಶಾಸಕರ ಸಭೆ ಕರೆಯಬಾರದು. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಡಿ. 4 ಮತ್ತು 5 ರಂದು ನಡೆಯುವ ಸಭೆಗೆ ನಾನೂ ಹಾಜರಾಗುತ್ತೇನೆ. ಶಾಸಕಾಂಗ ಪಕ್ಷದ ಸಭೆ ಕರೆದರೆ ಎಲ್ಲ 117 ಶಾಸಕರ ಸಮ್ಮುಖದಲ್ಲಿ ಮುಕ್ತ ಚರ್ಚೆ ನಡೆಸಲು ಸಾಧ್ಯವಾಗುತ್ತದೆ ಎಂದು ಯತ್ನಾಳ್ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








