ಬಳ್ಳಾರಿ : ಸಿದ್ದರಾಮಯ್ಯ ಅವರ ಜತೆಗಿದ್ದ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿಲ್ಲಾ. ಜೊತೆಗೆ ಸಿಎಂ ಸ್ಥಾನವನ್ನು ಕಳೆದುಕೊಂಡರು. ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಅವರ ಜೊತೆ ಬಿಜೆಪಿ ಶಾಸಕರು ಹೋಗ್ತಾರೆ ಅಂದ್ರೆ ಅದು ಹಗಲುಗನಸು. ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿಯ ಕೆಲ ಅತೃಪ್ತರು ನನ್ನ ಭೇಟಿ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ, ನಮ್ಮ ಸರಕಾರ ಉತ್ತಮವಾಗಿ ನಡೆಯುತ್ತಿದೆ.ಈ ರಾಜ್ಯದಲ್ಲಿ ಕಾಂಗ್ರೆಸ್ ನವರು ಮತ್ತೆ ಸಿಎಂ ಆಗೋಲ್ಲಾ. ನಮ್ಮ ಬಿಜೆಪಿ ಒಂದು ಕುಟುಂಬ ಭಿನ್ನಮತ ಸಹಜವಾಗಿರುತ್ತದೆ. ನಾವು ಬಗೆಹರಿಸಿಕೊಳ್ತೆವೆ. ರಾಜ್ಯ ಮತ್ತು ದೇಶಗಳಲ್ಲಿ ಬಿಜೆಪಿ ಬಿಟ್ಟು ಬೇರೆ ಪಕ್ಷ ಅಧಿಕಾರಕ್ಕೆ ಬರೋಲ್ಲಾ. ಸಿದ್ದರಾಮಯ್ಯ ಒಂದು ಕಡೆ ಹೋಗುತ್ತಾರೆ. ಡಿಕೆಶಿ ಒಂದು ಕಡೆ ಹೋಗುತ್ತಾರೆ. ಪರ್ಯಾಯ ಲೀಡರ್ ಗಳು ಇಲ್ಲಾ. ಯಾರು ಇದ್ದಾರೆ ಅಂತ ಹೇಳಿ ಎಂದು ಕಾಂಗ್ರೆಸ್ ನಾಯಕತ್ವವನ್ನು ಲೇವಡಿ ಮಾಡಿದ್ದಾರೆ. ಡಿಕೆಶಿ, ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ನಾವು, ರಾಜಕೀಯ ಮಾಡಿಲ್ಲಾ. ಕೊರೊನಾ ಸಮಯದಲ್ಲಿ ಇದು ಬೇಡ ಅಂದಿದ್ದೇವೆ. ಅದು ರಾಜಕೀಯ ಅಲ್ಲಾ.
ಗ್ರಾಮ ಪಂಚಾಯತ್ ಗೆ ನಾಮನೇಟ್ ಮಾಡೋ ವಿಚಾರದ ಬಗ್ಗೆ ಮಾತನಾಡಿದ ಅವರು, ಅದಿನ್ನು ಚರ್ಚೆ ನಡೆಯುತ್ತಿದೆ. ಸಂವಿಧಾನದಲ್ಲಿ ಅವಕಾಶ ಇದೆ. ಹೋದ ಕಡೆ ಎಲ್ಲಾ ಡಿಕೆಶಿ ಕೇಡರ್ ಬೇಸ್ ಮಾಡಲು ಹೊರಟಿದ್ದಾರೆ ಅಂತಾರೆ. ಆದರೆ ಬೇಸ್ ಇಲ್ದೆ ಚುನಾವಣೆ ಗೆಲ್ಲಲು ಸಾಧ್ಯಾನಾ. ಅಂದ ಹಾಗೇ ನಾವು ಚುನಾವಣೆ ಗೆಲ್ತಿದ್ವಿ. ಸಂವಿಧಾನಬದ್ದವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಇವರನ್ನು ಕೇಳಿ ಮಾಡಬೇಕಾ, ಇದನ್ನು ಕೇಳೋಕೆ ಅವರ್ಯಾರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.








