ADVERTISEMENT
Friday, May 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರೈತರಲ್ಲಿ ಆತಂಕ ಸೃಷ್ಟಿಸಲೆಂದೇ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ : ಭಗವಂತ್ ಖೂಬಾ

Naveen Kumar B C by Naveen Kumar B C
October 27, 2021
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ರೈತರಲ್ಲಿ ಆತಂಕ ಸೃಷ್ಟಿಸಲೆಂದೇ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ: ಭಗವಂತ್ ಖೂಬಾ

ಬೆಂಗಳೂರು : ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಸುಳ್ಳು, ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದು, ಉಪಚುನಾವಣೆಯ ಸೋಲಿನ ಭೀತಿ ಹಾಗೂ ಹತಾಶೆಯಿಂದ ರೈತರ ರಸಗೊಬ್ಬರ ಬಗ್ಗೆ ಸುಳ್ಳು ವದಂತಿ ಸೃಷ್ಟಿಸಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ತಿರುಗೇಟು ನೀಡಿದ್ದಾರೆ.

Related posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

May 7, 2026
ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

May 7, 2026

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಗವಂತ ಖೂಬಾ, ಕಳೆದ ಎರಡು ವರ್ಷದಲ್ಲಿ ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸ್ವಲ್ಪ ಭಾಗದಲ್ಲಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಹೆಚ್ಚಾಗುತ್ತಿದೆ. ರಾಜ್ಯದ ರೈತರು ಅದನ್ನು ಅಳವಡಿಸಿಕೊಂಡರೆ ರೈತರಿಗೆ ಅನುಕೂಲವಾಗಲಿದೆ. ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರದಿಂದ ಹೆಚ್ಚಿನ ಉತ್ಪಾದನೆ ಹೆಚ್ಚಾಗುತ್ತಿದೆ.ಹೀಗಾಗಿ ಕಾರಣಕ್ಕೆ ಸರ್ಕಾರ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಖರೀದಿಗೆ ಸೂಚಿಸಲಾಗುತ್ತಿದೆ. ಇದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ರೈತರು ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದವರು. ರೈತರಿಗೆ ಈ ರೀತಿ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಈ ರೀತಿ ವದಂತಿ ಸೃಷ್ಟಿಸಿದರೆ ರಸಗೊಬ್ಬರದ ಕೊರತೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಮುಂದಿನ ನಾಲ್ಕು ತಿಂಗಳಿಗೆ ಬೇಕಾದಷ್ಟು ಗೊಬ್ಬರ ಸಂಗ್ರಹಕ್ಕೆ ಮುಂದಾಗುತ್ತಾರೆ. ಇದರಿಂದ ದಲ್ಲಾಳಿಗಳ ಹಾವಳಿ ಹೆಚ್ಚಾಗಲಿದೆ.ಕಾಳಸಂತೆಯಲ್ಲಿ ರಸಗೊಬ್ಬರಕ್ಕೆ ಮಾರಾಟಕ್ಕೆ ಅವಕಾಶ ಕೊಡಬಾರದು. ನಾನು ಇಲಾಖೆಯ ಜವಾಬ್ದಾರಿ ಸಚಿವನಾಗಿ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

2008 ರಲ್ಲಿ ಕೇಂದ್ರದಲ್ಲಿ ಬೇಜವಾಬ್ದಾರಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಇದರಿಂದ ರಾಜ್ಯಗಳಲ್ಲಿ ಬೀಜ ಗೊಬ್ಬರದ ಸಮಸ್ಯೆಯಾಗಿತ್ತು. ಆಗ ಕೇಂದ್ರ ಸರ್ಕಾರ ಏಕೆ ಗೊಬ್ಬರ ಸರಬರಾಜು ಮಾಡಿರಲಿಲ್ಲ ಎಂದು ಹೇಳಬೇಕೆಂದು ಭಗವಂತ್ ಖೂಬಾ ಸಿದ್ದರಾಮಯ್ಯರಿಗೆ ಪ್ರಶ್ನಿಸಿದರು. ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ.ಈ ವರ್ಷ ಮಳೆ ಹೆಚ್ಚಳವಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಚೀನಾ ರಸಗೊಬ್ಬರ ರಫ್ತು ಸ್ಥಗಿತಗೊಳಿಸಿದೆ. ಅಮೇರಿಕಾದಲ್ಲಿ ಸೈಕ್ಲೋನ್ ಬಂದಿರುವುದರಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ವರ್ಷ ಆತ್ಮನಿರ್ಭರ ಭಾರತ ಅಡಿಯಲ್ಲಿ ನ್ಯಾನೊ ಯುರಿಯಾ ಉತ್ಪಾದನೆ ಹೆಚ್ಚಾಗಿದೆ. ಮುಂದಿನ ವರ್ಷ ನ್ಯಾನೊ ಡಿಎಪಿ ಉತ್ಪಾದನೆ ಮಾಡಲಾಗುವುದು. ಯೂರಿಯಾ ರಾಜ್ಯದಲ್ಲಿ 22 ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಎಂ ಒ ಪಿ 29. ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಮೈಸೂರು ಭಾಗದಲ್ಲಿ ಸ್ವಲ್ಪ ಕೊರತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ಕೇಂದ್ರದಿಂದ 3 ಸಾವಿರ ಮೆಟ್ರಿಕ್ ಟನ್ ತರಿಸಲು ಸೂಚನೆ ನೀಡಿದ್ದೇನೆ

ರಬಿ ಸಸನ್ ನಲ್ಲಿ 2. ಲಕ್ಷ ಮೆಟ್ರಿಕ್ ಟನ್ ಡಿಎಪಿ ಬೇಕಾಗಲಿದೆ. ಅದನ್ನು ಉತ್ಪಾದನೆ ಮಾಡಲಾಗುವುದು. ಎರಡು ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಕ್ರಮ ಕೈಗೊಂಡಿದ್ದೇವೆ. ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, 78.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಗೆ ಅವಶ್ಯವಿರುವ ಪರಿಕರಗಳ ಸರಬರಾಜನ್ನು ರಾಜ್ಯದಿಂದ ಸಮರ್ಪಕವಾಗಿ ಮಾಡಲಾಗಿದೆ. ರಸಗೊಬ್ಬರಗಳನ್ನು ಕೇಂದ್ರ ಸರ್ಕಾರದ ಹಂಚಿಕೆಯಂತೆ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ.

2021-22 ರ ಸಾಲಿನ ಹಿಂಗಾರು/ಬೇಸಿಗೆ ಹಂಗಾಮಿಗೆ (ಅಕ್ಟೋಬರ್-2021 ರಿಂದ ಮಾರ್ಚ್ 2022ರವರೆಗೆ) 16.94 ಲಕ್ಷ ಮೆಟನ್ (ಯೂರಿಯಾ-6.50 ಲಕ್ಷ ಮೆ.ಟನ್, ಡಿಎಪಿ 2.10 ಲಕ್ಷ ಮೆ.ಟನ್, ಎಂಒಪಿ-1.17 ಲಕ್ಷ ಮೆಟನ್ ಮತ್ತು ಕಾಂಪ್ಲೆಕ್ಸ್ 7.17 ಲಕ್ಷ ಮೆಟನ್) ಪ್ರಮಾಣದ ವಿವಿಧ ಗ್ರೇಡ್ ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ.2021-22 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 28 ಲಕ್ಷ ಹೆಕ್ಟೇರ್ ಗೆ ಪ್ರತಿಯಾಗಿ ಅಕ್ಟೋಬರ್ 26 ರವರೆಗೆ 5.02 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇ.18 ಬಿತ್ತನೆಯಾಗಿದೆ.

2021-22 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5.00 ಲಕ್ಷ ಹೆಕ್ಟೇರ್ ಇರುತ್ತದೆ. ನೇರ ರಸಗೊಬ್ಬರದ ಬದಲಿಗೆ ಕಾಂಪ್ಲೆಕ್ಸ್ ರಸಗೊಬ್ಬರದಲ್ಲಿ ಸಮತೋಲಿತ ಪೋಷಕಾಂಶಗಳೊಂದಿಗೆ ತ್ವರಿತವಾಗಿ ಬೆಳೆಗಳಿಗೆ ಲಭ್ಯವಾಗುವ ಕಾರಣ ಪ್ರಸ್ತುತ ನೇರ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಬಳಕೆ ಮಾಡಲು ರೈತರಿಗೆ ಪ್ರೋತ್ಸಾಹಿಸಲಾಗಿದ್ದು, ಈ ಬಗ್ಗೆ ರೈತರಿಗೆ ಮನವರಿಗೆ ಮಾಡಲಾಗಿದೆ ಎಂದರು.

Tags: bengalurubhagavanth khoobafarmarkarnatakakrushisaakshaatvsiddaramayya
ShareTweetSendShare
Join us on:

Related Posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

by Shwetha
May 7, 2026
0

ಚೆನ್ನೈ: ತಮಿಳುನಾಡಿನ ರಾಜಕೀಯ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗಿದೆ. ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ತಮಿಳುಗ ವೆಟ್ರಿ ಕಳಗಂ ಅಂದರೆ ಟಿವಿಕೆ ಪಕ್ಷಕ್ಕೆ ಸರ್ಕಾರ...

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

by Shwetha
May 7, 2026
0

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಈಗ ಬಿರುಗಾಳಿ ಎದ್ದಿದೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಸರ್ಕಾರದ ಪ್ರಭಾವಿ ಅಧಿಕಾರಿಗಳ ಆಟಕ್ಕೆ ಬ್ರೇಕ್ ಬಿದ್ದಿದೆ ಮಮತಾ...

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ:  ಸಮರ್ಥ್ ಶಾಮನೂರು

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಮರ್ಥ್ ಶಾಮನೂರು

by Shwetha
May 7, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಈ ಬಾರಿ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಾಮರ್ಥ್ಯ ನನ್ನಲ್ಲಿದೆ...

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by Shwetha
May 7, 2026
0

ಭಾರತದ ರಾಜಕೀಯ ನಕಾಶೆಯಲ್ಲಿ ಪಶ್ಚಿಮ ಬಂಗಾಳದ ಗೆಲುವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಜನತಾ ಪಕ್ಷವು ಬಂಗಾಳದ ನೆಲದಲ್ಲಿ ಸಾಧಿಸಿದ ಈ ಅಸಾಧಾರಣ ವಿಜಯವು ಕೇವಲ ಭಾರತಕ್ಕೆ...

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

by Shwetha
May 7, 2026
0

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದ ಸಂಭ್ರಮಕ್ಕೆ ಈ ಬಾರಿ ದೆಹಲಿ ಹೈಕಮಾಂಡ್‌ನಿಂದ ವಿಶೇಷ ಕೊಡುಗೆ ಸಿಗುವ ಸಾಧ್ಯತೆ ಇದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram