ಕುರುಬ ಸುನಾಮಿ ನೋಡಿ ಸಿದ್ದರಾಮಯ್ಯ ಗಾಬರಿಯಾಗಿದ್ರು : ಈಶ್ವರಪ್ಪ
ಬೆಂಗಳೂರು : ಕುರುಬ ಮೀಸಲಾತಿಗಾಗಿ ನಡೆದ ಪಾದಯಾತ್ರೆ ಟಿವಿಯಲ್ಲಿ ನೋಡಿ, ಕುರುಬ ಸುನಾಮಿಯನ್ನು ನೋಡಿ ಸಿದ್ದರಾಮಯ್ಯ ಗಾಬರಿಯಾಗಿದ್ರು ಅಂತಾ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕುರುಬ ಸಮಾವೇಶಕ್ಕೆ ಸಿದ್ದರಾಮಯ್ಯ ದಿನಾಂಕ ಫಿಕ್ಸ್ ಮಾಡಿದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯಗೆ ಕುರುಬ ಸಮುದಾಯ ಯಶಸ್ವಿಯಾಗಿರೋದು ಕಿರಿಕಿರಿ ತಂದಿದೆ. ಸಿದ್ದರಾಮಯ್ಯ ಇಲ್ಲದೇ ಕುರುಬ ಸಮುದಾಯಕ್ಕೆ ಲಕ್ಷ ಲಕ್ಷ ಜನ ಬಂದಿದ್ರು. ಇದು ಸಿದ್ದರಾಮಯ್ಯ ಗೆ ಕಿರಿಕಿರಿ ತಂದಿದೆ. ನಮ್ಮ ಸಮಾಜದ ಸ್ವಾಮೀಜಿಗಳು ಹೋಗಿ ಕರೆದರೂ ಹೋರಾಟಕ್ಕೆ, ಸಮಾವೇಶಕ್ಕೆ ಸಿದ್ದರಾಮಯ್ಯ ಬರಲಿಲ್ಲ. ಇದು ನನಗೆ ನೋವು ತಂದಿದೆ ಎಂದು ಹೇಳಿದ್ರು.
ಇನ್ನು ನನಗೆ ಸಿದ್ದರಾಮಯ್ಯ ಆಡಿದ ಮಾತು ನೋವಾಗಿದೆ. ಈಗ ಸಿದ್ದರಾಮಯ್ಯ ಕುರುಬ ಸಮಾವೇಶ ಮಾಡುವುದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ ರಾಜಕಾರಣ ಮಾಡುವುದನ್ನು ನಾನು ಒಪ್ಪಲ್ಲ. ಕಾಗಿನೆಲೆ ಸ್ವಾಮೀಜಿ ಮನೆಗೆ ಹೋದಾಗ ನನ್ನ ಬೆಂಬಲ ಇದೆ ಅಂದಿದ್ರು. ಆದರೆ ಆಮೇಲೆ ಆರ್ ಎಸ್ ಎಸ್ ಹಣ ತೆಗೆದುಕೊಂಡಿದ್ದಾರೆ ಅಂತ ಆರೋಪ ಮಾಡಿದ್ರು. ಇವರಿಲ್ಲದೇ ಲಕ್ಷ ಲಕ್ಷ ಜನ ಸೇರಿಬಿಟ್ರಲ್ಲ ಅದು ಸಿದ್ದರಾಮಯ್ಯ ಗೆ ಕಿರಿಕಿರಿ ಆಗಿದೆ. ಸಿದ್ದರಾಮಯ್ಯ ಈ ಸ್ವಭಾವ ಒಳ್ಳೆದಲ್ಲ. 70 ವರ್ಷ ಕಾಂಗ್ರೆಸ್ ಇತ್ತಲ್ಲ, ಆಗ ಯಾಕೆ ಮಂಡಕ್ಕಿ ತಿನ್ನುತ್ತಿದ್ರಾ ಇವರು. ದೇವೇಗೌಡ ಸಮಯದಲ್ಲಿ ಸಿದ್ದರಾಮಯ್ಯ ಮಂತ್ರಿ ಆದಾಗ ಯಾಕೆ ಮಾಡಲಿಲ್ಲ. ನಾನೇ ಹಿಂದುಳಿದ ವರ್ಗಗಳ ಚಾಂಪಿಯನ್, ದಲಿತ ಚಾಂಪಿಯನ್ ಅಂತಿದ್ರಲ್ಲ. ಸಿದ್ದರಾಮಯ್ಯ ಬರೀ ವೋಟಿಗಾಗಿ ಚಾಂಪಿಯನ್ನಾ ಅಂತ ಪ್ರಶ್ನೆ ಮಾಡಿದರು.
ಇದನ್ನೂ ಓದಿ : ಲೆಕ್ಕ ಕೇಳಲು ಇವನ್ಯಾವನು : ಮಾಜಿ ಸಿಎಂಗೆ ಈಶ್ವರಪ್ಪ ಏಕವಚನ ಪ್ರಯೋಗ
ಇವರನ್ನು ಕರೆಯದೆ ಸಮಾವೇಶ ಮಾಡಿದ್ರೆ ಒಂದು ಮಾತು. ಆದ್ರೆ ಇವರನ್ನು ಸ್ವಾಮೀಜಿಗಳೇ ಹೋಗಿ ಕರೆದಾಗ ಬೆಂಬಲ ಇದೆ ಅಂದಿದ್ರು. ಆದರೆ ಸ್ವಾಮೀಜಿ ಗಳ ವಿರುದ್ಧ ಆರ್ ಎಸ್ ಎಸ್ ಹಣ ತೆಗೆದುಕೊಂಡಿದ್ದಾರೆ ಅಂತ ಮಾತನಾಡ್ತೀರಲ್ಲ. ಪಾದಯಾತ್ರೆ ಟಿವಿಯಲ್ಲಿ ನೋಡಿ, ಕುರುಬ ಸುನಾಮಿಯನ್ನು ನೋಡಿ ಸಿದ್ದರಾಮಯ್ಯ ಗಾಬರಿಯಾಗಿದರು ಅಂತಾ ತಿವಿದಿದ್ದಾರೆ.