ಲೆಕ್ಕ ಕೇಳಲು ಇವನ್ಯಾವನು : ಮಾಜಿ ಸಿಎಂಗೆ ಈಶ್ವರಪ್ಪ ಏಕವಚನ ಪ್ರಯೋಗ
ಬೆಂಗಳೂರು : ಲೆಕ್ಕ ಕೇಳಲು ಇವನ್ಯಾವನು ಎಂದು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಏಕವಚನದಲ್ಲಿ ಕಿಡಿಕಾರಿದ್ದಾರೆ.
ರಾಮಮಂದಿರ ದೇಣಿಗೆ ವಿಚಾರವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗಳಿಗೆ ಇಂದು ವಿಧಾನಸೌಧದ ಬಳಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು. ಈ ವೇಳೆ ಮಾತಿನ ಭರಾಟೆಯಲ್ಲಿ ಒಂದು ಬಾರಿ ಏಕವಚನ ಪ್ರಯೋಗಿಸಿದರು.
ಇನ್ನು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈಶ್ವರಪ್ಪ, ಎಚ್ಡಿಕೆ, ಸಿದ್ದರಾಮಯ್ಯ ರಾಮಮಂದಿರಕ್ಕೆ ಒಂದು ರೂಪಾಯಿ ಕೊಡಲಿಲ್ಲ.
ಕುಮಾರಸ್ವಾಮಿ, ಸಿದ್ದರಾಮಯ್ಯ ದೇಣಿಗೆ ಲೆಕ್ಕ ಕೊಡಿ ಅನ್ನಲು ಯಾರು ಇವರು. ಹತ್ತು ರೂಪಾಯಿ ಕೊಡದ ಇವರು ಲೆಕ್ಕ ಕೇಳಲು ಯಾರು. ಎಂದು ಪ್ರಶ್ನಿಸಿದರು.
ಇನ್ನು ದೇಣಿಗೆ ಕೊಟ್ಟವರಿಗೆ ಲೆಕ್ಕ ಕೇಳಲು ಯೋಗ್ಯತೆ ಇದೆ. ದೇಣಿಗೆ ಕೊಡದ ಮನೆಗೆ ಮಾರ್ಕ್ ಮಾಡಿದ್ರೆ ಎಚ್ಡಿಕೆ ತೋರಿಸಲಿ ಎಂದು ಸವಾಲ್ ಹಾಕಿದ ಈಶ್ವರಪ್ಪ, ನಾಲಿಗೆ ಇದೆ ಅಂತ ಏನ್ ಬೇಕಾದ್ರೂ ಮಾತಾಡಬಹುದಾ. ಮುಸ್ಲಿಮರು, ಕ್ರೈಸ್ತರೇ ದೇಣಿಗೆ ಕೊಡ್ತಿದ್ಮೇಲೆ ಇವರಿಬ್ಬರಿಗೆ ಏನ್ ರೋಗ ಎಂದು ಕಿಡಿಕಾರಿದರು.
ಇದನ್ನೂ ಓದಿ : ರಾಮನ ಲೆಕ್ಕ ಕೇಳಲು ಇವರು ಯಾರು : ಹೆಚ್ ಡಿಕೆ ವಿರುದ್ಧ ಸಾಮ್ರಾಟ್ ಕಿಡಿ
ಎಚ್ಡಿಕೆ, ಸಿದ್ದರಾಮಯ್ಯ ಹೇಳಿಕೆಗಳು ಅಸಹ್ಯ ಹುಟ್ಟಿಸಿದೆ. ಗೋಮಾತೆ ಶಾಪದಿಂದ ಸಿದ್ದರಾಮಯ್ಯ ಅಧಿಕಾರ ಕಳ್ಕೊಂಡ್ರು. ಈಗ ಕ್ಷೇತ್ರನ್ನೂ ಕಳೆದುಕೊಂಡು ಬೇರೆ ಕ್ಷೇತ್ರ ಹುಡುಕ್ತಿದ್ದಾರೆ. ಇವರಿಬ್ರೂ ಮಾಜಿ ಮುಖ್ಯಮಂತ್ರಿಗಳು. ಇಲ್ಲದಿದ್ರೆ ನಾನು ಬೇರೆ ಭಾಷೆ ಪ್ರಯೋಗ ಮಾಡ್ತಿದ್ದೆ. ಕೋತಿಗಳೂ ಸಹ ಇವರಿಬ್ಬರ ಥರ ಮಾತಾಡಲ್ಲ ಅಂತಾ ವಾಗ್ದಾಳಿ ನಡೆಸಿದರು.