BJP | ಕುದುರೆ ವ್ಯಾಪಾರದ ವಿಚಾರ ಬಂದರೆ ಸಿದ್ದರಾಮಯ್ಯ ನಿಜವಾದ ಕಿಂಗ್
ಬೆಂಗಳೂರು : ಪಕ್ಷಾಂತರ ಹಾಗೂ ಕುದುರೆ ವ್ಯಾಪಾರದ ವಿಚಾರ ಬಂದರೆ ವಲಸೆ ನಾಯಕ ಸಿದ್ದರಾಮಯ್ಯ ಅವರೇ ನಿಜವಾದ ಕಿಂಗ್ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅತಿಯಾಗಿ ಮಾತನಾಡುವ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಾರಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕೊಳ್ಳಿ ಇಟ್ಟಿದ್ದಾರೆ. ಪಕ್ಷಾಂತರ ಹಾಗೂ ಕುದುರೆ ವ್ಯಾಪಾರದ ವಿಚಾರ ಬಂದರೆ ವಲಸೆ ನಾಯಕ ಸಿದ್ದರಾಮಯ್ಯ ಅವರೇ ನಿಜವಾದ ಕಿಂಗ್.
1983 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಸಿದ್ದರಾಮಯ್ಯ ತಮ್ಮ ಸಮಕಾಲೀನ ರಾಜಕಾರಣಿಗಳಿಗಿಂತ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿದ್ದಾರೆ. ಜನತಾ ದಳ, ಜನತಾ ದಳ ಸಂಯುಕ್ತ, ಜೆಡಿಎಸ್, ಅಖಿಲ ಭಾರತ ಪ್ರಗತಿಪರ ಜನತಾ ದಳ ಕೊನೆಗೆ ಅಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದಾರೆ. #ಪಕ್ಷಾಂತರಿಕುದುರೆವ್ಯಾಪಾರಿ ನಿಮ್ಮ ಮುಂದಿನ ಪ್ರಯಾಣ ಎತ್ತ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಸುವ ವಿಚಾರದಲ್ಲಿ @siddaramaiah ಅತ್ಯುತ್ತಮ ದಲ್ಲಾಳಿ.
ಸಿದ್ದರಾಮಯ್ಯ ಅವರೇ, 2012 ರಲ್ಲಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಸೋಲಿಸಿ ಬೈರತಿ ಸುರೇಶ್ ಅವರನ್ನು ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿದ್ದು ನೀವಲ್ಲವೇ? #ಪಕ್ಷಾಂತರಿಕುದುರೆವ್ಯಾಪಾರಿ
— BJP Karnataka (@BJP4Karnataka) June 11, 2022
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಸುವ ವಿಚಾರದಲ್ಲಿ ಸಿದ್ದರಾಮಯ್ಯ ಅತ್ಯುತ್ತಮ ದಲ್ಲಾಳಿ. ಸಿದ್ದರಾಮಯ್ಯ ಅವರೇ, 2012 ರಲ್ಲಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಸೋಲಿಸಿ ಬೈರತಿ ಸುರೇಶ್ ಅವರನ್ನು ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿದ್ದು ನೀವಲ್ಲವೇ?
ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅತಿಯಾಗಿ ಮಾತನಾಡುವ @siddaramaiah ಅವರು ಅತಿ ಹೆಚ್ಚು ಬಾರಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕೊಳ್ಳಿ ಇಟ್ಟಿದ್ದಾರೆ.
ಪಕ್ಷಾಂತರ ಹಾಗೂ ಕುದುರೆ ವ್ಯಾಪಾರದ ವಿಚಾರ ಬಂದರೆ ವಲಸೆ ನಾಯಕ ಸಿದ್ದರಾಮಯ್ಯ ಅವರೇ ನಿಜವಾದ ಕಿಂಗ್.#ಪಕ್ಷಾಂತರಿಕುದುರೆವ್ಯಾಪಾರಿ
— BJP Karnataka (@BJP4Karnataka) June 11, 2022
ಸರಡಗಿ ಸೋಲಿನ ಹಿನ್ನೆಲೆಯಲ್ಲಿ ಸತ್ಯ ಶೋಧನೆ ನಡೆಸಲು ವಿ.ಆರ್. ಸುದರ್ಶನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಿದ್ದರಾಮಯ್ಯನವರೇ, ಆ ಸತ್ಯಶೋಧನಾ ವರದಿ ಏಕೆ ಬಹಿರಂಗವಾಗಲಿಲ್ಲ? ನಿಮ್ಮ ಕುದುರೆ ವ್ಯಾಪಾರ ಬಹಿರಂಗವಾಗುತ್ತದೆ ಎಂಬ ಕಾರಣಕ್ಕಾಗಿಯೇ ಎಂದು ಬಿಜೆಪಿ ಕುಟುಕಿದೆ. Siddaramaiah is the real King when it comes to horse trading