ADVERTISEMENT
Thursday, September 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯಕ್ಕೆ ಬರಬೇಕಿದ್ದ ಅನುದಾನಕ್ಕೆ ನಿರ್ಮಲಾ ಸೀತಾರಾಮನ್ ಕಲ್ಲು : ಸಿದ್ದು ಕಿಡಿ

Mahesh M Dhandu by Mahesh M Dhandu
July 3, 2021
in Newsbeat, Politics, ರಾಜಕೀಯ
Siddaramaiah1
Share on FacebookShare on TwitterShare on WhatsappShare on Telegram

ರಾಜ್ಯಕ್ಕೆ ಬರಬೇಕಿದ್ದ ಅನುದಾನಕ್ಕೆ ನಿರ್ಮಲಾ ಸೀತಾರಾಮನ್ ಕಲ್ಲು : ಸಿದ್ದು ಕಿಡಿ

ಬೆಂಗಳೂರು : ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾದ ಅನುದಾನಕ್ಕೆ ನಿರ್ಮಲಾ ಸೀತಾರಾಮನ್ ಕಲ್ಲು ಹಾಕಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Related posts

r-ashoka-congress-hindus-ganeshotsava-maddur

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

September 16, 2026
tirupati-temple-reliance-foundation-25-electric-buses

ತಿರುಪತಿ ದೇವಸ್ಥಾನಕ್ಕೆ ರಿಲಯನ್ಸ್ ಫೌಂಡೇಶನ್‌ನಿಂದ 25 ಎಲೆಕ್ಟ್ರಿಕ್ ಬಸ್‌ಗಳ ಕೊಡುಗೆ

September 16, 2026

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತನ್ನನ್ನು ಆರಿಸಿ ಕಳಿಸಿರುವ ಕರ್ನಾಟಕಕ್ಕೆ ತಾನೇ ಮಾಡಿರುವ ಅನ್ಯಾಯವನ್ನು ಮುಚ್ಚಿಹಾಕಲು ವಾಸ್ತವಾಂಶವನ್ನು ತಿರುಚಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಬಿಜೆಪಿ ಪ್ರಜ್ಞಾವಂತ ಕನ್ನಡಿಗರಿಗೆ ಈ ಮೋಸವನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ಇದೆ.

2020-21ರ ರಾಜಸ್ವ ಕೊರತೆ ಮತ್ತು ತೆರಿಗೆಯಲ್ಲಿ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾದ ಪಾಲಿನಲ್ಲಿ ಆಗಿರುವ ಅನ್ಯಾಯವನ್ನು ಸರಿದೂಗಿಸಲು 15ನೇ ಹಣಕಾಸು ಆಯೊಗ ರಾಜ್ಯಕ್ಕೆ ರೂ.5495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು. ನಿರ್ಮಲಾ ಸೀತಾರಾಮನ್ ಆ ಅನುದಾನಕ್ಕೆ ಕಲ್ಲು ಹಾಕಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಗರಂ ಆಗಿದ್ದಾರೆ.

15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಕೇಂದ್ರದಿಂದ ಬರುವ ತೆರಿಗೆ ಪಾಲು ರೂ.31,180 ಕೋಟಿ ಎಂದು ಶಿಫಾರಸು ಮಾಡಿತ್ತು. 2020-21ರ ಕರ್ನಾಟಕದ ಬಜೆಟ್ ನಲ್ಲಿ ಈ ಪಾಲನ್ನು ರೂ.28.591ಕೋಟಿಗೆ ನಿಗದಿಪಡಿಸಲಾಗಿತ್ತು. ಕೊನೆಗೆ ಪರಿಷ್ಕøತ ಅಂದಾಜಿನಲ್ಲಿ ತೆರಿಗೆ ಪಾಲನ್ನು ರೂ.20,053 ಕೋಟಿಗೆ ಇಳಿಕೆ ಮಾಡಲಾಗಿತ್ತು.

GST

ರಾಜ್ಯದ ಬಿಜೆಪಿ ಸರ್ಕಾರವೇ 2020-21ರ ಸಾಲಿನ ರಾಜಸ್ವ ಕೊರತೆ ರೂ.19,485 ಎಂದು ಪರಿಷ್ಕರಿಸಿದ್ದರೂ, ಹಣಕಾಸು ಖಾತೆಯಂತ ಜವಾಬ್ದಾರಿ ಸ್ಥಾನದಲ್ಲಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಅದು ಮಿಗತೆಯಾಗಿ ಹೇಗೆ ಕಾಣಿಸಿದೆ ಎನ್ನುವುದನ್ನು ಅವರೇ ರಾಜ್ಯದ ಜನತೆಗೆ ವಿವರಣೆ ನೀಡಬೇಕಾಗುತ್ತದೆ.

ಕೇವಲ ವಿಶೇಷ ಅನುದಾನದಲ್ಲಿ ಮಾತ್ರವಲ್ಲ ಜಿಎಸ್ ಟಿ ತೆರಿಗೆ ಪರಿಹಾರದಲ್ಲಿ ಕೂಡಾ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ನಷ್ಟ ಸರಿದೂಗಿಸಲು ಬಿಜೆಪಿ ಸರ್ಕಾರ ಸಾಲದ ಮೊರೆ ಹೋಗಬೇಕಾಯಿತು. ಹೀಗಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಲೀ, ಬಿಜೆಪಿ ಸಂಸದರಾಗಲಿ ಈ ಅನ್ಯಾಯದ ವಿರುದ್ಧ ಸಣ್ಣ ವಿರೋಧದ ದನಿಯನ್ನು ಎತ್ತದೆ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಹೇರಿರುವ ತೆರಿಗೆ ಕಾರಣ ಎಂಬ ಹಸಿಸುಳ್ಳನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಹೇರಿರುವ ಅಬಕಾರಿ ತೆರಿಗೆಯೇ ಕಾರಣವಾಗಿದೆ. ಅಬಕಾರಿ ಸುಂಕವನ್ನು ಡೀಸೆಲ್ ಮೇಲೆ ಲೀಟರಿಗೆ ರೂ.3.45ರಿಂದ 31.84ಕ್ಕೆ ಮತ್ತು ಪೆಟ್ರೋಲ್ ಮೇಲೆ ರೂ.9.21ರಿಂದ 32.98ಕ್ಕೆ ಏರಿಸಲಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಕಾಂಗ್ರೆಸ್ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದೆ. ರಾಜ್ಯದ ಬಿಜೆಪಿ ನಾಯಕರು ಈ ಅನ್ಯಾಯವನ್ನು ಪ್ರತಿಭಟಿಸದಿರುವುದು ಮಾತ್ರವಲ್ಲ ಪರೋಕ್ಷವಾಗಿ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ಬೆಂಬಲಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Tags: BJPCongressex cm SiddaramaiahGSTNirmala Sitharaman
ShareTweetSendShare
Join us on:

Related Posts

r-ashoka-congress-hindus-ganeshotsava-maddur

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 16, 2026
0

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಬೆಂಗಳೂರು/ಮದ್ದೂರು : ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು....

tirupati-temple-reliance-foundation-25-electric-buses

ತಿರುಪತಿ ದೇವಸ್ಥಾನಕ್ಕೆ ರಿಲಯನ್ಸ್ ಫೌಂಡೇಶನ್‌ನಿಂದ 25 ಎಲೆಕ್ಟ್ರಿಕ್ ಬಸ್‌ಗಳ ಕೊಡುಗೆ

by admin
September 16, 2026
0

ತಿರುಮಲ, : ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹಸಿರು ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್...

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಲಿ ಎನ್ನುವುದು ಹೆಚ್ ಡಿ ಕುಮಾರಸ್ವಾಮಿ ಆಸೆ: ಕೇಂದ್ರ ಮಂತ್ರಿಯೋ ಅಥವಾ ಪಂಚಾಯ್ತಿ ಮೆಂಬರೋ? ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಕೆಂಡಾಮಂಡಲ

by Shwetha
September 16, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಈಗ ಮತ್ತೊಂದು ಸ್ಫೋಟಕ ಹಂತಕ್ಕೆ ತಲುಪಿದೆ. ಪ್ರಜ್ವಲ್ ರೇವಣ್ಣ...

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ: ಬೆರಳಚ್ಚು ಹೊಂದಿಕೆಯಾಗದವರಿಗೆ ವಿನಾಯಿತಿ

by Shwetha
September 16, 2026
0

ರಾಜ್ಯದ ಬಡ ಮತ್ತು ಅಗತ್ಯವಿರುವ ಜನರಿಗೆ ಆಹಾರ ಭದ್ರತೆ ಒದಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ...

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ  ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

ಐಎಎಸ್ ಅಧಿಕಾರಿಗಳ ಜತೆ ಜುಗಲ್ಬಂದಿ ಆಡಿದ್ದ ಕನ್ನಾಳೆ ಅಕ್ರಮಗಳ ಪಟ್ಟಿ ನೋಡಿ ಬೆಚ್ಚಿಬಿದ್ದ ತನಿಖಾಧಿಕಾರಿಗಳು:ಶೂನ್ಯದಿಂದ ನೂರಾರು ಕೋಟಿ ಒಡೆಯನಾದ ಅಕ್ರಮ ದಲ್ಲಾಳಿಯ ಆಟಕ್ಕೆ ಬ್ರೇಕ್ ಹಾಕಿದ ಸಿಐಡಿ.

by Shwetha
September 16, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ಹಗರಣದ ರೂವಾರಿ, ವಿಧಾನಸೌಧದ ಕಾರಿಡಾರ್‌ಗಳಲ್ಲಿ ದರ್ಬಾರ್ ನಡೆಸುತ್ತಿದ್ದ ಬಸವರಾಜ್ ಕನ್ನಾಳೆ ಎಂಬ ಸಾಮಾನ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram