Siddaramaiah | ಥೋ.. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ
ಬಾಗಲಕೋಟೆ : ಥೋ.. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ.. ಜನ ಪ್ರವಾಹದಿಂದ ಸಾಯ್ತಿದ್ದಾರೆ, ನರಳ್ತಿದ್ದಾರೆ, ಡಾನ್ಸ್ ಮಾಡ್ತಾವೆ ಅವು ಮಿನಿಸ್ಟರ್ ಗಳು.. ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಗುಡುಗು..
ಹೌದು..! ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಡ್ಯಾನ್ಸ್ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆದ್ರೆ ರಾಜ್ಯದಾದ್ಯಂತ ಮಳೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು ಬರ್ಬಾದ್ ಆಗಿದೆ. ರೈತರು ಬೆಳೆ ಕಳೆದುಕೊಂಡಿದ್ದಾರೆ. ಇತ್ತ ಮೊನ್ನೆ ಮೊನ್ನೆ ಸಚಿವ ಉಮೇಶ್ ಕತ್ತಿ ಅವರು ಇಹಲೋಕ ತ್ಯಜಿಸಿದ್ದಾರೆ. ಹೀಗಿದ್ದರೂ ಬಿಜೆಪಿ ನಾಯಕರೂ ಜನಸ್ಪಂದನ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಥೋ.. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ. ಜನ ಪ್ರವಾಹದಿಂದ ಸಾಯ್ತಿದ್ದಾರೆ, ನರಳ್ತಿದ್ದಾರೆ, ಡಾನ್ಸ್ ಮಾಡ್ತಾವೆ ಅವು ಮಿನಿಸ್ಟರ್ ಗಳು. ಅವರಿಗೆ ಜನರ ಬಗ್ಗೆ ಸ್ವಲ್ಪವಾದ್ರೂ ಕಾಳಜಿ, ಮಾನ ಮರ್ಯಾದೆ ಇದೆಯಾ ? ಸಂತೋಷದ ಕಾಲಾನಾ ಇದು, ಖುಷಿಪಡೋ ಕಾಲಾನಾ ಇದು.
ಮೊನ್ನೆಯಷ್ಟೇ ಪಾಪ, ಉಮೇಶ ಕತ್ತಿ ಸತ್ತು ಹೋಗಿದ್ದಾನೆ. ಇವಕ್ಕೆ ಸ್ಬಲ್ಪನಾದರೂ ಜವಾಬ್ದಾರಿ ಅನ್ನೋದೆ ಇಲ್ಲ. ಇವರೆಲ್ಲಾ ಬೇಜವಾಬ್ದಾರಿ ಮಂತ್ರಿಗಳು ಎಂದು ಕಿಡಿಕಾರಿದ್ದಾರೆ.