Siddaramaiah | ನದಿಗಳ ಜೋಡಣೆ ಘೋಷಣೆ.. ಸರ್ವಾಧಿಕಾರಿ ಧೋರಣೆ
ಮೈಸೂರು : ನದಿಗಳ ಜೋಡಣೆ ಘೋಷಣೆಯು ಸರ್ವಾಧಿಕಾರಿ ಧೋರಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ನದಿಗಳ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸುಮಾರು 46 ಸಾವಿರ ಕೋಟಿ ರೂಪಾಯಿ ಇಡುತ್ತೇವೆ ಎಂದು ಹೇಳಿದ್ದಾರೆ. ಇದು ಕಾರ್ಯಸಾಧುವಾದ ಯೋಜನೆ ಅಲ್ಲ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಅದಕ್ಕಾಗಿ ಘೋಷಣೆ ಮಾಡಿದ್ದಂಗೆ ಇದೆ. ನಮ್ಮ ರಾಜ್ಯದವರ ಜೊತೆ ಚರ್ಚೆ ಮಾಡಿದ್ದಂಗಿಲ್ಲ. ಕೃಷ್ಣ, ಗೋದಾವರಿ, ಪೆನ್ನಾರ್ ನದಿಗಳ ಜೋಡಣೆ ಅಂತ ಹೇಳಿದ್ದಾರೆ.
ಒಂದು ಸಭೆ ನಡೆದಿದೆ, ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿ ಸಭೆ ಆಗಿದೆ. ಅಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಆಗಿದೆ. ಇದರಿಂದ 347 ಟಿಎಂಸಿ ನೀರು ಸಿಗುತ್ತದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲ ಎಂದು ಚರ್ಚೆ ಆಗಿದೆ.
ರಾಜಸ್ಥಾನ ಬಿಟ್ಟರೆ, ಬಹುತೇಕ ರಾಜ್ಯಗಳಲ್ಲಿ ಒಣ ಭೂಮಿಯಿದೆ. 55% ರಷ್ಟು ಭೂಮಿ, ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನೀರಾವರಿ ಭೂಮಿಯಿದೆ.
ಕರ್ನಾಟಕದಲ್ಲಿ 35% ನೀರಾವರಿ ಇದೆ. ರಾಜಸ್ತಾನ ಬಿಟ್ಟರೆ ರಾಜ್ಯದಲ್ಲಿ ಒಣ ಭೂಮಿ ಹೆಚ್ಚಿದೆ. ನದಿ ಜೋಡಣೆಯಿಂದ ಹೆಚ್ಚು ನೀರು ಸಿಗಲ್ಲ.
ಯಾವಯಾವ ನದಿಗಳಿಂದ ಹೆಚ್ಚು ನೀರು ಸಿಗುತ್ತದೆ ಎಂದು ಚರ್ಚೆ ಮಾಡಿಲ್ಲ. ರಾಜ್ಯದವರ ಜೊತೆಗೆ ಚರ್ಚೆ ಮಾಡಿಲ್ಲ. ಇದರಿಂದ ಜಲವಿವಾದ ಶುರುವಾಗುತ್ತದೆ.
ಹಾಗಾಗಿ ದಕ್ಷಿಣ ಭಾರತದ ರಾಜ್ಯಗಳ ಜೊತೆ ಸಭೆ ಕರೆಯಬೇಕು. ಎಲ್ಲಾ ಮಾಹಿತಿ ಜನರ ಮುಂದೆ ಇಡಬೇಕು. ಚರ್ಚೆ ಮಾಡದೆ ಘೋಷಣೆ ಮಾಡಿದ್ದಾರೆ. ಇದೊಂದು ಸರ್ವಾಧಿಕಾರಿ ಧೋರಣೆ ಎಂದು ಸಿದ್ದರಾಮಯ್ಯ ಖಂಡಿಸಿದ್ದಾರೆ.