Siddaramaiah | ನಾನು ಮಾಡಿದ ಕೆಲಸ ಯಾವ ಮಂತ್ರಿ ಮಾಡಿಲ್ಲ
ಮೈಸೂರು : ನಾನು ಮಾಡಿದ ಕೆಲಸ ಯಾವ ಮಂತ್ರಿ ಮಾಡಿಲ್ಲ. ಜಾತಿ , ಹಣದ ಮೇಲೆ ಚುನಾವಣೆ ನಡೆಯುತ್ತಿದೆ. ನಮ್ಮ ಫರ್ಫಾಮೆನ್ಸ್ ಮೇಲೆ ಅಧಿಕಾರಕ್ಕೆ ಬರ್ತೀನಿ ಎಂಬುದು ಸುಳ್ಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಸಾಕಷ್ಟು ಹರಿದಾಡುತ್ತಿದೆ.
ಈ ನಡುವೆ ಅವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಫರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಇದೀಗ ಈ ವಿಚಾರಕ್ಕೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆವೊಂದು ನಡೆಯಿತು. ಈ ಸಭೆಗೆ ಸಿದ್ದರಾಮಯ್ಯ ಆಗಮಿಸಿದ್ರು.
ಆಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮರೀಗೌಡ, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರನ್ನ ಕೇಳಿಕೊಂಡರು.

ಅದಕ್ಕೆ ಅಲ್ಲಿನ ಕಾರ್ಯಕರ್ತರು ಕಳೆದ ಚುನಾವಣೆಯಲ್ಲಿ ಸಾಹೇಬರನ್ನು ಸೋಲಿಸಿ ಮತ್ತೆ ಏಕೆ ಕರೆಯುತ್ತೀರಾ ಅಂತಾ ಆಕ್ರೋಶ ಹೊರಹಾಕಿದರು.
ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಿದ್ದಾರಾಮಯ್ಯ, ಯಾವುದೇ ಪಕ್ಷ ಚುನಾವಣೆಯಲ್ಲಿ ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುತ್ತೆ.
ಅಭ್ಯರ್ಥಿ ಆಗುವವರು ಪಕ್ಷದ ಅಭ್ಯರ್ಥಿ ಅಷ್ಟೇ. ಮನೆ ಮನೆಗೆ ಹೋಗಿ ಮತ ಕೇಳೋರು ಕಾರ್ಯಕರ್ತರು.
ನಾನು ಹತ್ತು ವರ್ಷ ಚಾಮುಂಡೇಶ್ವರಿಯಲ್ಲಿ ನಿಂತಿರಲಿಲ್ಲ. 2018 ರಲ್ಲಿ ಸ್ಪರ್ದಿಸಿದಾಗ ಅನೇಕ ಬೂತ್‌ಗಳಲ್ಲಿ ಕಾರ್ಯಕರ್ತರು ನಿಂತಿರಲಿಲ್ಲ.
ಹೀಗಾಗಿ ನಾನು ಸೋಲಬೇಕಾಯ್ತು. ಸೋಲು ಗೆಲುವು ಸಹಜ,ಆಗಂತ ನಾನು ವ್ಯಥೆ ಪಡೋಕೆ ಹೋಗಲ್ಲ. ಅಳೋಕೆ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.
ಇನ್ನು ನಾನು ಬಾದಾಮಿಗೆ ಎರಡೇ ದಿನ ಹೋಗಿದ್ದು. ಆದರೂ ಅಲ್ಲಿ ನನ್ನನ್ನ ಗೆಲ್ಲಿಸಿದ್ರು. ಆದ್ರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದೇನೆ.
ನಾನು 83 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದಾಗ ಚಾಮುಂಡೇಶ್ವರಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಿ. ಇಂದು ಮೂಲಭೂತ ಸೌಲಭ್ಯ ಸಿಕ್ಕಿದ್ರೆ ಸಿದ್ದರಾಮಯ್ಯ ಶಾಸಕರಾಗಿ, ಸಿಎಂ ಆಗಿದ್ರಿಂದ. ನಾನು ಮಾಡಿದ ಕೆಲಸವನ್ನ ಯಾವ ಮಂತ್ರಿ ಮಾಡಿಲ್ಲ.
ಈಗ ಜಾತಿ, ಹಣದ ಮೇಲೆ ಚುನಾವಣೆ ನಡೆಯುತ್ತಿದೆ. ನಮ್ಮ ಫರ್ಫಾಮೆನ್ಸ್ ಮೇಲೆ ಅಧಿಕಾರಕ್ಕೆ ಬರ್ತೀನಿ ಎಂಬುದು ಸುಳ್ಳು.
ಕಾರ್ಯಕರ್ತರು ಮತದಾರರ ಬಳಿ ಸಂಪರ್ಕ ಇಟ್ಟುಕೊಳ್ಳಬೇಕು. ಹಿಂದೆ ಕಾಂಗ್ರೆಸ್ ಬಿ ಫಾರಂ ತೆಗೆದುಕೊಂಡು ಬಂದ್ರೆ ಗೆಲ್ತಾರೆ ಅಂತಿದ್ರು. ಇಟ್ ಈಸ್ ನಾಟ್ ಶ್ಯೂರ್ ಎಂದರು.