Siddaramaiah | ಹಗರಣ ನಡೆಸಿದವರಿಗೆ ರಕ್ಷಣೆ.. ಇದು ಬಿಜೆಪಿ ಸರ್ಕಾರದ ನೈತಿಕ ದಿವಾಳಿತನ
1 min read
Siddaramaiah | ಹಗರಣ ನಡೆಸಿದವರಿಗೆ ರಕ್ಷಣೆ.. ಇದು ಬಿಜೆಪಿ ಸರ್ಕಾರದ ನೈತಿಕ ದಿವಾಳಿತನ
ಬೆಂಗಳೂರು : ರೈತ ನಾಯಕರ ಮೇಲೆ ಹಲ್ಲೆ ನಡೆಸಿದವರಿಗೆ ಮೃದು ಧೋರಣೆ. ಕೋಮು ಪ್ರಚೋದನೆ ನೀಡುವವರಿಗೆ ಬೆಂಬಲ. ಹಗರಣ ನಡೆಸಿದವರಿಗೆ ರಕ್ಷಣೆ. ಸಂತ್ರಸ್ತೆಯದ್ದೇ ತಪ್ಪು ಎಂದು ಅತ್ಯಾಚಾರಿಗಳಿಗೆ ಪರೋಕ್ಷ ಬೆಂಬಲ. ಆದರೆ ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಜಾಮೀನು ರಹಿತ ಸೆಕ್ಷನ್‌ಗಳು. ಇದು ಬಿಜೆಪಿ ಸರ್ಕಾರದ ನೈತಿಕ ದಿವಾಳಿತನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಎನ್ ಎಸ್ ಯುಐ ಪ್ರತಿಭಟನಾಕಾರರ ಮೇಲೆ ಪ್ರಕರಣ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ತನ್ನ ಟ್ವಿಟ್ಟರ್ ಖಾತೆಯಲ್ಲಿ..
ಸಚಿವ ಬಿ.ಸಿ.ನಾಗೇಶ್ ಅವರ ನಿವಾಸದ ಎದುರು ಎನ್‌ಎಸ್‌ಯುಐ ಪ್ರತಿಭಟನೆ ಹಮ್ಮಿಕೊಂಡಿತ್ತು. ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸುವಂತ ಕೆಲಸ ಮಾಡಿಲ್ಲ. ಪ್ರತಿಭಟನೆ ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತೆ?
ರೈತ ನಾಯಕರ ಮೇಲೆ ಹಲ್ಲೆ ನಡೆಸಿದವರಿಗೆ ಮೃದು ಧೋರಣೆ. ಕೋಮು ಪ್ರಚೋದನೆ ನೀಡುವವರಿಗೆ ಬೆಂಬಲ. ಹಗರಣ ನಡೆಸಿದವರಿಗೆ ರಕ್ಷಣೆ. ಸಂತ್ರಸ್ತೆಯದ್ದೇ ತಪ್ಪು ಎಂದು ಅತ್ಯಾಚಾರಿಗಳಿಗೆ ಪರೋಕ್ಷ ಬೆಂಬಲ. ಆದರೆ ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಜಾಮೀನು ರಹಿತ ಸೆಕ್ಷನ್‌ಗಳು. ಇದು ಬಿಜೆಪಿ ಸರ್ಕಾರದ ನೈತಿಕ ದಿವಾಳಿತನ.

ಸಂವಿಧಾನದ ಮೂಲಭೂತ ಹಕ್ಕಿನಂತೆ ಎನ್‌ಎಸ್‌ಯುಐ ಪ್ರತಿಭಟನೆ ಮಾಡಿದೆ. ಆರಗ ಜ್ಞಾನೇಂದ್ರ ಅವರು ಪೊಲೀಸರ ಮೇಲೆ ಒತ್ತಡ ಹಾಕಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪ್ರಕರಣ ಹಾಕಿಸಿದ್ದು ತಪ್ಪು. ಗೃಹ ಸಚಿವರು ಅಗತ್ಯ ಇರುವ ಕಡೆಗೆ ಕ್ರಮಕೈಗೊಳ್ಳದೇ, ಅಗತ್ಯ ಇಲ್ಲದ ಕಡೆಗೆ ಕ್ರಮ ಕೈಗೊಳ್ಳುತ್ತಾರೆ.
ಪ್ರತಿಭಟನಾ ನಿರತ ಎನ್‌ಎಸ್‌ಯುಐ ಸಂಘಟನೆಯವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇದನ್ನು ಸಹಿಸಿಕೊಂಡು ಸಹಿಸಿಕೊಂಡು ನಾವು ಸುಮ್ಮನೆ ಇರುವುದಿಲ್ಲ. ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸದಿದ್ದರೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.