C T RAVI | ಸಿ.ಟಿ.ರವಿ ಕೋಮು ತಂಟೆಕೋರ : ಸಿದ್ದರಾಮಯ್ಯ ಕಿಡಿ
1 min read
C T RAVI | ಸಿ.ಟಿ.ರವಿ ಕೋಮು ತಂಟೆಕೋರ : ಸಿದ್ದರಾಮಯ್ಯ ಕಿಡಿ
ಬೆಂಗಳೂರು : ಕನ್ನಡ ಮಾತಾಡಿದ ಎಂದು ಚಂದ್ರು ಹತ್ಯೆಯಾಗಿದೆ ಎಂಬ ಶಾಸಕ ಸಿ.ಟಿ.ರವಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬೈಕ್ ಡಿಕ್ಕಿಗೆ ಸಂಬಂಧಿಸಿದ ಗಲಾಟೆಯಲ್ಲಿ ನಡೆದ ಕೊಲೆಯಲ್ಲೂ ಭಾಷೆ, ಧರ್ಮ ಎಳೆದುತಂದು ಸಮಾಜಕ್ಕೆ ಬೆಂಕಿ ಹಚ್ಚುವ ಸಿ.ಟಿ.ರವಿ ಯಂಥ ಕೋಮು ತಂಟೆಕೋರರ ವಿರುದ್ಧ ಪೊಲೀಸರು ಮೊದಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗೋರಿಪಾಳ್ಯದ ಕೊಲೆ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಮಹಾನಿರ್ದೇಶಕರು ಹೇಳಿಕೆ ನೀಡಿ, ಇದು ವೈಯಕ್ತಿಕ ಘರ್ಷಣೆಯಿಂದ ನಡೆದ ಹತ್ಯೆ, ಭಾಷೆ ವಿಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ. ಕೋಮುದ್ವೇಷ ಕಕ್ಕುವುದು ಮತ್ತು ಎಲ್ಲದಕ್ಕೂ ನನ್ನ ಹೆಸರು ಎಳೆದು ತರುವುದು ಸಿಟಿ ರವಿ ಅವರಿಗೆ ಮಾನಸಿಕ ರೋಗವಾಗಿ ಬಿಟ್ಟಿದೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಮೌನವಾಗಿದ್ದು ತಮಿಳುನಾಡಿಗೆ ನೆರವಾಗುವ, ಕನ್ನಡ ಭಾಷೆಯನ್ನು ಹತ್ತಿಕ್ಕಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ದಮನಕಾರಿ ನಿಲುವನ್ನು ಬೆಂಬಲಿಸುವ ಸಿ.ಟಿ.ರವಿ ಅವರ ಒಂದು ಕಾಲು ಹೇಗೂ ರಾಜ್ಯದ ಹೊರಗಿದೆ, ಇನ್ನೊಂದು ಕಾಲನ್ನೂ ಎತ್ತಿ ಹೊರಗೆ ಹೋದರೆ ರಾಜ್ಯಕ್ಕೆ ಕ್ಷೇಮ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ. siddaramaiah slams c t ravi bangalore