ಬೆಂಗಳೂರು: ಸಿಎಂ ಯಡಿಯೂರಪ್ಪ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ರಾಜಕೀಯ ವೈರುಧ್ಯ ಮರೆತು ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಭಾಷಣ ಕೇಳಿ ಸ್ವತ: ಸಿಎಂ ಬಿ.ಎಸ್ ಯಡಿಯೂರಪ್ಪನವರೇ ಭಾವುಕರಾಗಿದ್ದಾರೆ.
ತಮ್ಮ ಭಾಷಣದ ವೇಳೆ ಸಿದ್ದರಾಮಯ್ಯ, ಬಿಎಸ್ ವೈಗೆ ಅಭಿನಂದನೆ ಸಲ್ಲಿಸುತ್ತಾ, ನಮ್ಮಿಬ್ಬರ ರಾಜಕೀಯ ಸಿದ್ಧಾಂತಗಳು ಬೇರೆಯೇ ಇರಬಹುದು. ಆದರೆ ಅದೆಲ್ಲಕ್ಕಿಂತಲೂ ಮಾನವ ಸಂಬಂಧ ದೊಡ್ಡದು. ಅವರ ರಾಜಕೀಯ ಹೋರಾಟದಿಂದಲೇ ಮೇಲೆ ಬಂದವರು. ೧೦೦ ವರ್ಷಕ್ಕೂ ಹೆಚ್ಚು ಕಾಲ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಸಿದ್ದರಾಮಯ್ಯ ಹಾರೈಸಿದಾಗ ವೇದಿಕೆಯಲ್ಲಿದ್ದ ಸಿಎಂ ಯಡಿಯೂರಪ್ಪ ಭಾವುಕರಾದರಲ್ಲದೆ, ಕಣ್ಣಂಚಲ್ಲಿ ಬಂದ ಹನಿ ನೀರನ್ನು ಒರೆಸಿಕೊಂಡ ದೃಶ್ಯ ಕಂಡುಬಂತು.
ಇದಾದ ಬಳಿಕ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿದ್ದರಾಮಯ್ಯನವರ ಆಗಮನದಿಂದಲೇ ಈ ಕಾರ್ಯಕ್ರಮಕ್ಕೆ ಕಳೆ ಬಂತು ಎಂದರು.
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...








