Karnataka | ಧಾರವಾಡ ಅಪಘಾತ : ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
ಬೆಂಗಳೂರು : ಧಾರವಾಡ ತಾಲೂಕಿನ ಬಾಡ ಕ್ರಾಸ್ ಬಳಿ ನಡೆದ ಟೆಂಪೋ ಟ್ರಾಕ್ಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಸ್ಪಂದಿಸಿದ್ದಾರೆ.
ಸಿದ್ದರಾಮಯ್ಯ ತನ್ನ ಟ್ವೀಟ್ ನಲ್ಲಿ.. ಧಾರವಾಡ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವಿಗೀಡಾದ ಸುದ್ದಿ ತಿಳಿದು ಮನಸಿಗೆ ತೀವ್ರ ಘಾಸಿಯಾಯಿತು.
ಮೃತ ದುರ್ದೈವಿಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು. ಸಂಯಮ, ಜಾಗರೂಕತೆಯ ವಾಹನ ಚಾಲನೆಯೊಂದೆ ಅಪಘಾತಗಳನ್ನು ತಡೆಯಲಿರುವ ಏಕೈಕ ಮಾರ್ಗ.
ಮತ್ತೆಂದೂ ಇಂಥಾ ದುರಂತ ನಡೆಯದಿರಲಿ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ. siddaramaiah tweet on karnataka-dharwad accident