Siddaramaiah | ಹುಸಿ ಬೆದರಿಕೆಗೆ ನಾವು ಹೆದರುವುದಿಲ್ಲ, ತನಿಖೆಗೆ ಸಿದ್ಧ
ಬೆಂಗಳೂರು : ಹುಸಿ ಬೆದರಿಕೆಗೆ ನಾವು ಹೆದರುವುದಿಲ್ಲ. ಧೈರ್ಯ ಇದ್ದರೆ ತನಿಖೆ ಬೇಗ ಶುರುಮಾಡಿ. ನಾವು ತನಿಖೆ ಎದುರಿಸಲು ಸಿದ್ಧ ಇದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಕಾಲದ ಹಗರಣಗಳನ್ನು ಬಯಲುಗೊಳಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡಿದ್ದರು.
ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಕಾಲದ ಹಗರಣಗಳನ್ನು ಬಯಲುಗೊಳಿಸುತ್ತೇವೆ ಎಂದು ಬಿಜೆಪಿ ಬ್ಲಾಕ್ ಮೇಲ್ ಗೆ ಇಳಿದಿದೆ. ಈ ಹುಸಿ ಬೆದರಿಕೆಗೆ ನಾವು ಹೆದರುವುದಿಲ್ಲ. ಧೈರ್ಯ ಇದ್ದರೆ ತನಿಖೆ ಬೇಗ ಶುರುಮಾಡಿ. ನಾವು ತನಿಖೆ ಎದುರಿಸಲು ಸಿದ್ಧ ಇದ್ದೇವೆ ಎಂದು ಹೇಳಿದ್ದಾರೆ.
https://twitter.com/siddaramaiah/status/1568586314219667456?s=20&t=RDneBB23H6UsFk7b7Tp-cw
ಇದಲ್ಲದೆ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬಾತ ಹಣಕ್ಕಾಗಿ ಧಮ್ಕಿ ನೀಡಿದ್ದಕ್ಕಾಗಿ ಶೃಂಗೇರಿ ಉಪನೋಂದಣಾಧಿಕಾರಿಯಿಂದ ಪೊಲೀಸರಿಗೆ ದೂರು. ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕನನ್ನು ಪೊಲೀಸರೇ ಸಚಿವರ ಮನೆಗೆ ನುಗ್ಗಿ ಬಂಧಿಸಿದ್ದರು. ಇಬ್ಬರೂ ಈಗ ಸುರಕ್ಷಿತ.
ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ ವಸೂಲಿಯ ಪೀಡನೆಯಿಂದ ಬೇಸತ್ತ ಗುತ್ತಿಗೆದಾರರು ರಾಜ್ಯದಾದ್ಯಂತ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ರಸ್ತೆ, ಸೇತುವೆ, ವಸತಿ, ಶಾಲೆ, ಆಸ್ಪತ್ರೆ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಅತಿವೃಷ್ಟಿ ಪರಿಹಾರ ಕಾಮಗಾರಿಗಳೂ ನಡೆಯುತ್ತಿಲ್ಲ.
https://twitter.com/siddaramaiah/status/1568585791814914049?s=20&t=RDneBB23H6UsFk7b7Tp-cw
ಭ್ರಷ್ಟ ಸಚಿವರ ಮಾತಿಗೆ ಅಧಿಕಾರಿಗಳು ಕವಡೆ ಕಿಮ್ಮತ್ತಿನ ಬೆಲೆ ಕೊಡುತ್ತಿಲ್ಲ. ಜನ ಕಂಗಾಲಾಗಿ ಹೋಗಿದ್ದಾರೆ. ಆಡಳಿತ ಯಂತ್ರವೇ ಕುಸಿದು ಹೋಗಿದೆ. ಆದಷ್ಟು ಬೇಗ ಚುನಾವಣೆ ನಡೆದು ಬಿಜೆಪಿ ಸರ್ಕಾರ ತೊಲಗಿ ಹೋದರೆ ಸಾಕು ಎಂದು ಜನ ಕಾಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.








