ಬಾಗಲಕೋಟೆ: ಮನವಿ ಮಾಡಲು ಬಂದ ಮಹಿಳೆಯರ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿತನ ತೋರಿದ್ದಾರೆ. ಬಾದಾಮಿಯಲ್ಲಿ ಕಟ್ಟಡ ಭೂಮಿ ಪೂಜೆ ಬಳಿಕ ಸಿದ್ದರಾಮಯ್ಯ ತೆರಳುತ್ತಿದ್ದರು. ಈ ವೇಳೆ ಮಹಿಳೆಯರು ಮನೆ ಹಕ್ಕು ಪತ್ರ ವಿತರಿಸಿ ಅಂತ ಮನವಿ ಮಾಡುತ್ತಿದ್ದರು. ಆಗ ಮನೆ ಹಕ್ಕು ಪತ್ರ ಕೇಳಲು ಬಂದ ಮಹಿಳೆಯರ ಮುಂದೆ ‘ಚಿಮ್ಮನಕಟ್ಟಿ ಜಿಂದಾಬಾದ್’ ನಡೆಯಿರಿ ಎಂದು ಸಿದ್ದರಾಮಯ್ಯ ಉಡಾಫೆಯಾಗಿ ನಡೆದುಕೊಂಡಿದ್ದಾರೆ.
ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಮಹಿಳೆಯರು. ಸಿದ್ದರಾಮಯ್ಯ ಅವರನ್ನು ತಡೆದು ಮನೆ ಹಕ್ಕು ಪತ್ರಗಳನ್ನು ನೀಡಿ ಎಂದು ಮನವಿ ಮಾಡಿದ್ದರು. ಅರಣ್ಯ ಇಲಾಖೆ ಜಾಗದಲ್ಲಿ ಆಶ್ರಯ ಮನೆ ನಿರ್ಮಾಣ ಹಿನ್ನೆಲೆ ಯಾವ ಸೌಲಭ್ಯಗಳು ಸಿಗದೆ ಇಲ್ಲಿತ ಜನ ಪರದಾಡುತ್ತಿದ್ದಾರೆ. ಹಕ್ಕು ಪತ್ರ ಇಲ್ಲದಕ್ಕೆ ಮೂಲಸೌಕರ್ಯ ಸಿಗುತ್ತಿಲ್ಲ. ಆದ್ದರಿಂದ ಮಹಿಳೆಯರು ಹಕ್ಕು ಪತ್ರ, ಜೊತೆಗೆ ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಮನವಿ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಇತ್ತ ನನಗೆ ಬಾಯಾರಿಕೆಯಾಗಿದೆ ನೀರು ಕೊಡ್ರೋ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜೊತೆಗೆ ಬಾದಾಮಿಯ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೆಸರು ಹೇಳಿ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಾರೆ.








