ಸಿದ್ದರಾಮಯ್ಯನವರೇ ಸುಳ್ಳೇ ನಿಮ್ಮ ಮನೆ ದೇವರಾ..? : ಬಿಜೆಪಿ Siddaramaiah’s
ಬೆಂಗಳೂರು : ಸುಳ್ಳು ಹೇಳುವುದಕ್ಕಾಗಿ “ನೊಬೆಲ್ “ಪಾರಿತೋಷಕ ನೀಡುವುದಾದರೆ ಅದನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಸುಳ್ಳು ಹೇಳುವುದಕ್ಕಾಗಿ “ನೊಬೆಲ್ “ಪಾರಿತೋಷಕ ನೀಡುವುದಾದರೆ ಅದನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು. ಅವರಿವರಿಗೆ “ಗೊಬೆಲ್ಸ್ ಥಿಯರಿ” ಪ್ರತಿಪಾದಕರು ಎಂದು ನೀವು ಆರೋಪಿಸುತ್ತಿದ್ದಿರಿ. ಆದರೆ ನೀವೇ ಈಗ ದೊಡ್ಡ ಗೊಬೆಲ್ ಆಗಿದ್ದೀರಿ. ಸುಳ್ಳೇ ನಿಮ್ಮ ಮನೆ ದೇವರಾ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯನವರೇ, ದಲಿತ ನಾಯಕತ್ವದ ವಿಚಾರದಲ್ಲಿ ನೀವು ಹೇಳಿದ ಸಂಗತಿಗಳನ್ನು ನೆನಪು ಮಾಡಿಕೊಡಬೇಕೇ? ನಾನೇ ದಲಿತ, ಮತ್ತೇಕೆ ದಲಿತ ಸಿಎಂ ಎಂದು ನೀವು ಹೇಳಿದ ಮಾತೇ ಅತಿದೊಡ್ಡ ಸುಳ್ಳು. ಆ ಸುಳ್ಳು ಹೇಳುತ್ತಲೇ ಕಾಂಗ್ರೆಸ್ ಪಕ್ಷದ ಎಲ್ಲಾ ದಲಿತ ನಾಯಕರನ್ನು ಮೂಲೆಗುಂಪು ಮಾಡಿಬಿಟ್ಟಿರಿ.
https://twitter.com/BJP4Karnataka/status/1474306352298090499?s=20
ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್ ಅವರನ್ನು 2013 ರಲ್ಲಿ ಸೋಲಿಸಿದ್ದು ಯಾರು, ಸೋಲಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನೀವು ಕೊನೆಗೂ ಹೇಳಲೇ ಇಲ್ಲ. ನಮ್ಮ ಅಧ್ಯಕ್ಷರು ಸೋತು ಬಿಟ್ಟರು ಎಂದು ಹೇಳಿ ಕರುಣೆ ತೋರುವ ನಾಟಕವಾಡುತ್ತಾ, ಕಾಲ ಕಳೆದಿದ್ದು ನಿಜವಲ್ಲವೇ ಎಂದು ಕಿಡಿಕಾರಿದೆ.
https://twitter.com/BJP4Karnataka/status/1474303845106814977?s=20
ದಲಿತರಿಗೆ ನೀಡಿದ ಕೊಡುಗೆಗಳ ಬಗ್ಗೆ #ಬುರುಡೆರಾಮಯ್ಯ ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಾರೆ. ಎಸ್ಇಪಿ, ಟಿಎಸ್‌ಪಿ ಹಣವನ್ನು ದಲಿತ ಫಲಾನುಭವಿಗಳಿಗೆ ತಲುಪಿಸಲೇ ಇಲ್ಲ. ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯದಲ್ಲಿ ” ಚೆಂಬು, ದಿಂಬು” ಖರೀದಿಗೆ ನಡೆದ ಭ್ರಷ್ಟಾಚಾರವನ್ನೂ ಸಹಿಸಿಕೊಂಡಿರಿ. ಹಾಗಾದರೆ ನಿಮ್ಮ ದಲಿತ ಕಾಳಜಿ ದೊಡ್ಡ ಸುಳ್ಳಲ್ಲವೇ ಎಂದು ಬಿಜೆಪಿ ಟ್ವೀಟ್ ಮಾಡಿದೆ.








