ಸಿದ್ದರಾಮಯ್ಯರದ್ದು ಗಾಂಧಿವಾದವಲ್ಲ, ಜಿನ್ನಾವಾದ : ಸಿ.ಟಿ.ರವಿ
ಚಿಕ್ಕಮಗಳೂರು : ಸಿದ್ದರಾಮಯ್ಯನವರದ್ದು ಜಿನ್ನಾ ವಾದ ಆಗುತ್ತೆ, ಗಾಂಧಿವಾದ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಬಹಳ ಸಲ ತಮ್ಮ ಮೂಲದ್ದೇ ಸಂಶಯ ಕಾಡುತ್ತಿರುತ್ತದೆ.
ಒಮ್ಮೆ ನಾನು ಹಿಂದೂ ಅಂತಾರೆ, ಆಮೇಲೆ ನನಗೂ ಹಿಂದುಗೂ ಸಂಬಂಧವಿಲ್ಲ ಅಂತಾರೆ. ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ.
ಹಾಗಾದ್ರೆ ಗಾಂಧಿ ದನದ ಮಾಂಸ ತಿನ್ನಿ ಅಂತ ಹೇಳಿದ್ರಾ ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು, ಗೋಮಾಂಸ ತಿಂತೀನಿ ಅನ್ನೋರು ಗಾಂಧಿ ಹಿಂದುತ್ವ ಹೇಗಾಗುತ್ತೆ ಎಂದು ಸಿದ್ದರಾಮಯ್ಯರನ್ನ ಕುಟುಕಿದರು.
ಇದೇ ವೇಳೆ ನನಗೆ ಆರ್ ಎಸ್ ಎಸ್ ಮೂಲಗಳಿಂದ ಮಾಹಿತಿ ಬಂದಿದೆ, ಏಪ್ರಿಲ್ ನಲ್ಲಿ ಸಿಎಂ ಬದಲಾಗುತ್ತಾರೆ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯೆಸಿ,
ಸಿದ್ದರಾಮಯ್ಯ ಯಾವಾಗ ಆರ್ ಎಸ್ ಎಸ್ ಗೆ ಬಂದ್ರೋ ಗೊತ್ತಿಲ್ಲ. ಆರ್ ಎಸ್ ಎಸ್ ತಿಳಿಯಬೇಕೆಂದರೇ ಇಲ್ಲಿಗೆ ಬರಬೇಕು,
ಮೊದಲು ಆರ್ ಎಸ್ ಎಸ್ ಗೆ ಬರಲಿ ಆಮೇಲೆ ಮೂಲ ತಿಳಿಯಲಿ ಎಂದು ವಾಗ್ದಾಳಿ ನಡೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









