ಅಚ್ಚೇದಿನ್ ಆಯೇಗಾ ಅಂತಾರೆ, ಇದೇನಾ ಅಚ್ಚೇದಿನ್ : ಬೆಲೆ ಏರಿಕೆಗೆ ಸಿದ್ದು ಗುಡುಗು

1 min read
siddaramaiah

ಅಚ್ಚೇದಿನ್ ಆಯೇಗಾ ಅಂತಾರೆ, ಇದೇನಾ ಅಚ್ಚೇದಿನ್ : ಬೆಲೆ ಏರಿಕೆಗೆ ಸಿದ್ದು ಗುಡುಗು

ಬೆಂಗಳೂರು : ಪೆಟ್ರೋಲ್ ಬೆಲೆಯನ್ನೂ ಹೆಚ್ಚಳ ಮಾಡ್ತಾನೇ ಇದ್ದಾರೆ, ಗ್ಯಾಸ್ ಬೆಲೆ ಹೆಚ್ಚಿಸಿದ್ದಾರೆ. ಅಚ್ಚೇದಿನ್ ಆಯೇಗಾ ಅಂತಾರೆ, ಇದೇನಾ ಅಚ್ಚೇದಿನ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದರು. ಕೆಇಆರ್‍ಸಿಗೆ ಎಸ್ಕಾಂಗಳು ದರ ಏರಿಕೆಗೆ ಮನವಿ ಸಲ್ಲಿಸಿತ್ತು.

ಹಾಗಾಗಿ ಸರಾಸರಿ ಯೂನಿಟ್‍ಗೆ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ದರ ಏರಿಸಿದ್ದು ಸರಿಯಲ್ಲ.

ಜನಸಾಮಾನ್ಯರು ಊಟಕ್ಕಾಗಿ ಪರದಾಡ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.

Siddaramaiah's

ಪೆಟ್ರೋಲ್ ಬೆಲೆಯನ್ನೂ ಹೆಚ್ಚಳ ಮಾಡ್ತಾನೇ ಇದ್ದಾರೆ, ಗ್ಯಾಸ್ ಬೆಲೆ ಹೆಚ್ಚಿಸಿದ್ದಾರೆ. ಅಚ್ಚೇದಿನ್ ಆಯೇಗಾ ಅಂತಾರೆ, ಇದೇನಾ ಅಚ್ಚೇದಿನ್ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಿರಂತರವಾಗಿ ತೈಲ ಬೆಲೆ ಏರಿಸುತ್ತಲೇ ಬರುತ್ತಿದ್ದಾರೆ.

ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಇಷ್ಟೊಂದು ಬೆಲೆ ಯಾವ ಕಾಲದಲ್ಲೂ ಇರಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಪೆಟ್ರೋಲ್ ಬಂಕ್ ಮುಂದೆ ನಾವು ಧರಣಿ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd