ಸಿದ್ದರಾಮಯ್ಯ , ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟ್ ವಾರ್…!

1 min read
dk shivakumar

ಸಿದ್ದರಾಮಯ್ಯ , ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟ್ ವಾರ್…!

ಬೆಂಗಳೂರು : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದ ಕಾವು ದಿನೇ ದಿನೇ ಹೆಚ್ಚಾಗ್ತಿದೆ. ಈ ನಡುವೆ ಬಿಜೆಪಿ – ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನ ಮಾಡಿಕೊಳ್ತಾಯಿದ್ದಾರೆ.. ಇದೀಗ ಬಿಜೆಪಿಯು ಟ್ವೀಟ್ ಮೂಲಕ ಕೆಪಿಸಿಸಿಗೆ ತಿವಿದಿದೆ.. ಅದ್ರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.. ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲಿ ಪಾಲು ಪಡೆದಿದ್ದೀರಾ..? ಎಷ್ಟು ದಿನ ಸಿದ್ದರಾಮಯ್ಯಗೆ ರಾಜಕೀಯ ದಾಳವಾಗುತ್ತೀರಿ ಎಂದು ಕನಕಪುರ ಬಂಡೆಯನ್ನ ಕಮಲಪಡೆ ಪ್ರಶ್ನೆ ಮಾಡಿದೆ..

ಅಲ್ಲದೇ ಟ್ವೀಟ್ ನಲ್ಲಿ , ಅಂದು ಕೇಂದ್ರೀಯ ತನಿಖಾ ಸಂಸ್ಥೆಗಳು ಅಕ್ರಮ ಆದಾಯ ಸಂಬಂಧಿತವಾಗಿ ನಿಮ್ಮ ಮೇಲೆ ದಾಳಿ ನಡೆಸಿದಾಗ ಈ ಲೋಕಜ್ಞಾನ ಎಲ್ಲಿ ಹೋಗಿತ್ತು, ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲೂ ಬೆಂಬಲಿಗರ ಮೂಲಕ ಪಾಲು ಪಡೆದಿರುವ ಬಗ್ಗೆ ರಾಜ್ಯದ ಜನತೆಗೆ ಅನುಮಾನವಿದೆ, ನಿಜವೇ? ಎಂದು ಡಿಕೆ ಶಿವಕುಮಾರ್ ಅವರಿಗೆ  ಬಿಜೆಪಿ ಪ್ರಶ್ನಿಸಿದೆ.

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿರುವ ಬಿಜೆಪಿ, ವೀರಶೈವ ಲಿಂಗಾಯತ ವಿಭಜನೆಗೆ ಸಿದ್ದರಾಮಯ್ಯ ಅವರು ಎಂಬಿ ಪಾಟೀಲ್ ಅವರನ್ನು ದಾಳವಾಗಿ ಬಳಸಿಕೊಂಡರು,ಇದರ ಪರಿಣಾಮವಾಗಿ ಕಾಂಗ್ರೆಸ್ ಸರ್ವನಾಶವಾಯಿತು. ನಾನೂ ದಲಿತ ಎನ್ನುತ್ತಲೇ ದಲಿತ ನಾಯಕರನ್ನು ಹತ್ತಿಕ್ಕಿ, ದಲಿತರನ್ನೇ ಅವಮಾನ ಮಾಡಿದರು ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯರನ್ನು ಸಮರ್ಥಿಸಿಕೊಂಡು ನೀವು ಬಲಿಪಶುವಾಗಲು ಹೊರಟಿದ್ದೀರಾ ಪಾಟೀಲರೇ…? ದಲಿತ ನಾಯಕರ ವಿರುದ್ಧ ಸಿದ್ದರಾಮಯ್ಯ ಅವರು ಆಡಿರುವ ಮಾತುಗಳು ದಲಿತ ಸಮುದಾಯದ ಭಾವನೆಯನ್ನು ಕೆರಳಿಸಿದೆ. ಇದರಿಂದ ಬಚಾವ್ ಆಗುವುದಕ್ಕೆ ಸಿದ್ದರಾಮಯ್ಯ ಅವರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಎಂ.ಬಿ. ಪಾಟೀಲರೇ, ಎಷ್ಟು ದಿನ ದಲಿತ ವಿರೋದಿ ಸಿದ್ದರಾಮಯ್ಯನವರಿಗೆ ರಾಜಕೀಯ ದಾಳವಾಗುತ್ತೀರಿ…? ಎಂದು ವ್ಯಂಗ್ಯವಾಡಿದೆ.

ಅಲ್ಲದೇ ಸಿದ್ದರಾಮಯ್ಯ ಅವರು ದಲಿತ ಶಬ್ಧ ಬಳಸಿಯೇ ಇಲ್ಲ ಎಂಬ ಎಂ.ಬಿ ಪಾಟೀಲ್ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ , ಇದು ನಿಮ್ಮ ನಾಯಕ ಸಿದ್ದರಾಮಯ್ಯನವರ ಭಾಷಣ, ಸರಿಯಾಗಿ ಕೇಳಿಸಿಕೊಳ್ಳಿ. ಇಲ್ಲಿ ದಲಿತ ನಾಯಕರ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳು ಅರ್ಥವಾಗುತ್ತವೆ ಎಂದು ಬಿಜೆಪಿ ಸಿದ್ದರಾಮಯ್ಯ ಅವರು ದಲಿತ ನಾಯಕರ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಟ್ಯಾಗ್ ಮಾಡಿ ವಾಗ್ದಾಳಿ ನಡೆಸಿದೆ..

ಸದ್ಯದಲ್ಲೆ ಕರ್ನಾಟಕದಲ್ಲಿ ಮತಾಂತರ ವಿರೋಧಿ ಕಾನೂನು – ಬೊಮ್ಮಾಯಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd