ವಿಜಯಪುರ: ಹಿಂದುಯೇತರ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ವಿವಾದ ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲಿನ ಸಿದ್ದೇಶ್ವರ ದೇವಸ್ಥಾನದ ಜಾತ್ರೆಗೂ ಇದು ಕಾಲಿಟ್ಟಿದೆ.
ಕೇವಲ ಹಿಂದು ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂಬ ಬ್ಯಾನರ್ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಶ್ರೀರಾಮ ಸೇನೆಯ ಸದಸ್ಯರು ದೇವಾಲಯದ ಸಮಿತಿ ಮುಂದೆ ಈ ರೀತಿ ಮನವಿ ಮಾಡಿದ್ದರು. ಇದರ ಬೆನ್ನಲ್ಲಿಯೇ ಈ ಬ್ಯಾನರ್ ಕಂಡು ಬಂದಿದೆ.
ಮುಸ್ಲಿಂರು ದೇಶದ ಕಾನೂನನ್ನು ನಂಬುವುದಿಲ್ಲ. ಅವರು ಪವಿತ್ರ ಗೋವುಗಳ ಹಂತಕರಾಗಿದ್ದಾರೆ. ಜಿಹಾದ್ ಹೆಸರಿನಲ್ಲಿ ಧಾರ್ಮಿಕ ಮತಾಂತರದಲ್ಲಿ ತೊಡಗಿ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದಾರೆ. ಅಂತಹವರಿಗೆ ಸಿದ್ದೇಶ್ವರ ಜಾತ್ರೆಯಲ್ಲಿ ಯಾವುದೇ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂಬ ಬ್ಯಾನರ್ ದೇವಸ್ಥಾನದ ಹೊರಗೆ ಕಂಡು ಬಂದಿದೆ. ಇದು ವಿವಾದಕ್ಕೆ ಕಾರಣವಾಗಿದೆ.
ಜ.12 ರಿಂದ 16 ರ ವರೆಗೆ ವರೆಗೆ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ. ದೇವಸ್ಥಾನದ ಎದುರೇ ಈ ಬ್ಯಾನರ್ ಕಟ್ಟಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದಾರೆ. ಈ ಮಧ್ಯೆ ಕಾರ್ಯಕರ್ತರು ಹಾಗೂ ಮಂಡಳಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ.