ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ : ಸಿದ್ದರಾಮಯ್ಯ ಹೇಳಿದ್ದೇನು..?
ಬೆಂಗಳೂರು : ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ ಕೊಡಲು ಹೊರಟಿರುವ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ ಕೊಡಲು ಹೊರಟಿರುವ ಕ್ರಮ ಸರಿಯಿಲ್ಲ.
ಯಾವುದೇ ಜಾತಿ ಹಿಂದುಳಿದಿದೆ ಎಂದು ರಾಜ್ಯ ಸರ್ಕಾರ ಏಕಾಏಕಿ ತೀರ್ಮಾನಿಸಲಿಕ್ಕೆ ಆಗುವುದಿಲ್ಲ. ನಾನು 17 ಶಾಸಕರ ನಾಯಕನಲ್ಲ : ಮಿತ್ರಮಂಡಳಿಗೆ `ಸಾಹುಕಾರ್’ ಶಾಕ್
ಅದನ್ನು ಗುರುತಿಸಲಿಕ್ಕಾಗಿಯೇ ಸಾಂವಿಧಾನಿಕವಾಗಿ ರಚನೆಗೊಂಡ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದೆ.
ಅಲ್ಲಿ ಅದು ಮೊದಲು ತೀರ್ಮಾನವಾಗಬೇಕು. ಆಧಾರ ಇಲ್ಲದೇ ಯಾವುದೇ ಜಾತಿ ಹಿಂದುಳಿದಿದೆ ಎಂದು ತೀರ್ಮಾನಿಸೋದು ಸರಿಯಲ್ಲ ಎಂದು ವಿವರಿಸಿದ್ದಾರೆ.
ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಲಿಂಗಾಯತರೂ ಸೇರಿದಂತೆ ಯಾವುದೇ ಜಾತಿ ಹಿಂದುಳಿದ ಜಾತಿಗಳ ಗುಂಪಿಗೆ ಸೇರುವ ಬಗ್ಗೆ ನನ್ನ ಆಕ್ಷೇಪ ಇಲ್ಲ. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ `ಆ ವಿಡಿಯೋ’ ಕಾರಣ..? ಬಾಂಬ್ ಸಿಡಿಸಿದ ಡಿಕೆಶಿ..!
ಆದರೆ ಅದಕ್ಕಿಂತ ಮೊದಲು ಆ ಸಮುದಾಯದ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಯಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel