“ಅಕ್ಕಿಗೆ ಬಜೆಟ್ ನಲ್ಲಿ ದುಡ್ಡು ಇಟ್ಟಿಲ್ಲ” ಎಂದ ಹೆಚ್ ಡಿಕೆಗೆ ಸಿದ್ದು ಗುದ್ದು
ಬೆಂಗಳೂರು : ಏಳು ಕಿಲೋ ಅಕ್ಕಿಗೆ ಬಜೆಟ್ನಲ್ಲಿ ದುಡ್ಡು ಇಟ್ಟಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪ ನಿರಾಧಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಏಳು ಕಿಲೋ ಅಕ್ಕಿಗೆ ಬಜೆಟ್ನಲ್ಲಿ ದುಡ್ಡು ಇಟ್ಟಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪ ನಿರಾಧಾರವಾದುದು.
ಬಜೆಟ್ ನಲ್ಲಿ ನೀಡಿದ ದುಡ್ಡು ಕಡಿಮೆಯಾದರೆ ಪೂರಕ ಬಜೆಟ್ ನಲ್ಲಿ ನೀಡುವುದು ಸಂಪ್ರದಾಯ. ಅದನ್ನೇ ಅವರು ಕೊಟ್ಟಿದ್ದಾರೆ. ‘ಆಡಳಿತ ಒಂದು ನಿರಂತರ ಪ್ರಕ್ರಿಯೆ’..
ಏಳು ಕಿಲೋ ಅಕ್ಕಿ ಹೊಸ ಘೋಷಣೆ ಆಗಿರಲಿಲ್ಲ, ಹಿಂದಿನ ಎರಡು ವರ್ಷ ಕೂಡಾ ಕೊಟ್ಟಿದ್ದೆವು. ಅದನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಿದೆ.
ಅದು ಹೆಚ್ ಡಿ ಕುಮಾರಸ್ವಾಮಿ ಅವರು ಕೈಯಿಂದ ಕೊಟ್ಟದ್ದಲ್ಲ, ಮುಖ್ಯಮಂತ್ರಿಯಾಗಿ ಕೊಟ್ಟದ್ದು. ಸಮ್ಮಿಶ್ರ ಸರ್ಕಾರ ನಮ್ಮದೂ ಆಗಿತ್ತು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.









