ಮಹಿಳಾ ಅವಹೇಳನಕಾರಿ ಹೇಳಿಕೆಗೆ ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ಧಾರ್ಥ

1 min read

ಹಲವು ದಿನಗಳಿಂದ ಕೇವಲ ವಿವಾದಾತ್ಮಕ ಹೇಳಿಕೆಗಳನ್ನೇ ನೀಡಿ ಸುದ್ದಿಯಾಗ್ತಿರುವ , ಕಾಲಿವುಡ್ ನಟ ಸಿದ್ಧಾರ್ಥ್ ಅವರು ಇತ್ತೀಚೆಗೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಬಗ್ಗೆ ತೀರಾ ಅತಿರೇಖ ಹಾಗೂ ದ್ವಂದ್ವಾರ್ಥ ಬರುವಂತಹ , ಲೈಂಗಿಕ ನಿಂದನೆ ಎನಿಸುವಂತಹ ಹೇಳಿಕೆ ನೀಡಿ ಟ್ವೀಟ್ ಮಾಡಿದ್ದರು.. ಇದರಿಂದ ಸೈನಾ ಅಭಿಮಾನಿಗಳು  , ನೆಟ್ಟಿಗರು ಸಿದ್ಧಾರ್ಥ್ ವಿರುದ್ಧ ಕೆಂಡ ಕಾರುತ್ತಿದ್ದಾರೆ.. ಅಷ್ಟೇ ಅಲ್ಲದೇ ಸೈನಾ ತಂದೆ ಸಿದ್ಧಾರ್ಥ ತಮ್ಮ ಮಗಳ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.. ಸಿದ್ಧಾರ್ಥ್ ವಿರುದ್ಧ ಹೈದರಾಬಾದ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹೈದರಾಬಾದ್‍ನಲ್ಲಿ ಮಹಿಳೆಯೋರ್ವರು ಸಿದ್ಧಾರ್ಥ್ ಹೇಳಿಕೆಯ ವಿರುದ್ಧ ದೂರು ನೀಡಿದ್ದರು. ಮಹಿಳೆಯರ ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ಹೀಗೆ ಹೇಳಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ವಿರುದ್ಧ ಐಪಿಸಿ ಸೆಕ್ಷನ್ 509ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಐಟಿ ಆಕ್ಟ್ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.

ಈ ನಡುವೆ ಸಿದ್ಧಾರ್ಥ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿ ಟ್ವಿಟ್ಟರ್ ನಲ್ಲಿ ಕ್ಷಮಾಪಣಾ ಪತ್ರ ಬರೆದಿದ್ದಾರೆ.. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರದಲ್ಲಿ ಪ್ರಧಾನ ಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜರೂಕತೆಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

 

ಸೈನಾ ನೆಹ್ವಾಲ್ ಅವರ ಈ ಟ್ವೀಟ್ ಗೆ ಸಿದ್ದಾರ್ಥ್, ವಿಶ್ವದ ಸಟಲ್ ಕಾಕ್ ಚಾಂಪಿಯನ್. ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ರೆಹಾನ್ನಾ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದರು. ಗ್ರಾಮ್ಯವಾಗಿ ‘ಕಾಕ್’ ಎನ್ನುವುದು ಪುರುಷನ ಗುಪ್ತಾಂಗವನ್ನ ಸೂಚಿಸುತ್ತಯದೆ.. ಹೀಗಾಗಿ ಈ ಪದ ಬಳಕೆ ಮೂಲಕ  ಟ್ವೀಟ್ ಮಾಡಿದ್ದ ಸಿದ್ದಾರ್ಥ್ ತೀವ್ರ ಟೀಕೆಗೆ ಗುರಿಯಾಗಿದ್ದರು.. ಸೈನಾ ಅವರನ್ನು ಲೈಂಗಿಕವಾಗಿ ಅವಮಾನಿಸಿದ್ದಾರೆ  ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಆದ ನಂತರ ಕಡೆಗೂ ಕ್ಷಮಾಪಣಾ ಪತ್ರ ಬರೆದಿರುವ ಸಿದ್ಧಾರ್ಥ್, ಆತ್ಮೀಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅಂದು ನಿಮ್ಮ ಟ್ವೀಟ್ ಅನ್ನು ನಾನು ಓದಿದಾಗ ನನಗೆ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ.

ಅದಕ್ಕೆ ಆ ರೀತಿ ಪ್ರತಿಕ್ರಿಯೆ ನೀಡಿದೆ. ಯಾವುದೇ ದುರುದ್ದೇಶದಿಂದ ನಾನು ಆ ರೀತಿ ಪ್ರತಿಕ್ರಿಯೆಯನ್ನು ನೀಡಲಿಲ್ಲ. ನಾನು ಸ್ತ್ರೀವಾದಿ ಮಿತ್ರ. ನನ್ನ ಟ್ವೀಟ್‍ನಲ್ಲಿ ಯಾವುದೇ ಲಿಂಗವನ್ನು ಸೂಚಿಸಿಲ್ಲ. ನಿಮ್ಮ ಮೇಲೆ ಯಾವುದೇ ದುರುದ್ದೇಶದಿಂದ ಆ ಪದಗಳನ್ನು ಬಳಸಲಿಲ್ಲ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಈ ಪತ್ರವನ್ನು ನೀವು ಸಮ್ಮತಿಸುತ್ತೀರಾ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ ಎಂದು ಬರೆದು ಕ್ಷಮೆಯನ್ನು ಕೇಳಿದ್ದಾರೆ. ಸೈನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ,,, ನಾನು ಆರಾಮಾಗಿದ್ದೇನೆ ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದು ಟ್ವೀಟ್ ಮಾಡುವ ಮೂಲಕ ಸರಳವಾಗಿ ಆದ್ರೂ ಮನಸ್ಸಿಗೆ ಇರಿದ ಹಾಗೆ ಬರೆದಿದ್ದಾರೆ..

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd