ಪಶ್ಚಿಮಬಂಗಾಳದ ಸಿಲಿಗುರಿಯಲ್ಲೂ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗ್ತಿರುವ ಹಿನ್ನೆಲೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಲಾಕ್ ಡೌನ್ ನಿಂದಾಗಿ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದು ಕಣ್ಣು ಹಾಯಿಸಿದಷ್ಟು ದೂರವೂ ರಸ್ತೆಗಲ ಖಾಲಿ ಖಾಲಿ ಹೊಡೆಯುತ್ತಿವೆ. ಇದರ ನಡುವೆ ಜಿಲ್ಲಾಡಳಿತ ಕೊರೊನಾ ನಿರ್ಮೂಲನೆಗೆ ಅನೇಕ ಕ್ರಮಗಳನ್ನ ಕೈಗೊಂಡಿದೆ. ಇಡೀ ನಗರವನ್ನೇ ಸ್ಯಾನಿಟೈಶೇಷನ್ ಮಾಡಿಸಲಾಗ್ತಿದೆ. ಈಗಾಗಲೇ ೭ ದಿನಗಳ ಲಾಕ್ ಡೌನ್ ಮಾಡಲಾಗಿದ್ದು, ಸಿಲಿಗುರಿಯ ೪೭ ವಾರ್ಡ್ಗಳಲ್ಲಿ ಮುನ್ಸಪಿಲ್ ಕಾರ್ಪರೇಷನ್ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ೧೩೬೭೯ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ದಿನೇ ದಿನೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಸೋಂಕು ನಿವಾರಣೆಗೆ ಹಲವಾರು ಕ್ರಮಗಳನ್ನ ಕೈಗೊಳಲಾಗ್ತಿದೆ.
ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್
ಮುಂಬೈ: ಕನ್ನಡದ 'ಸೂರ್ಯವಂಶ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ...








