ಕರ್ಕಶ ಸಂಗೀತ ನಿಲ್ಲಿಸುವಂತೆ ತುಂಬು ಗರ್ಭಿಣಿ ಮನವಿ ಮಾಡಿದ್ದಕ್ಕೆ ಕೋಪಗೊಂಡ ಪಾಪಿಗಳು, ಗುಂಡು ಹಾರಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಘಟನೆಯಲ್ಲಿ ಮಹಿಳೆ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಗರ್ಭಪಾತವಾಗಿದೆ. ಸದ್ಯ ಮಹಿಳೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಉಪ ಪೊಲೀಸ್ ಕಮಿಷನರ್ ರವಿಕುಮಾರ್ ಸಿಂಗ್ ಈ ಕುರಿತು ಮಾತನಾಡಿ, ಮಹಿಳೆಯ ಗಂಟಲಿಗೆ ಗುಂಡು ತಗುಲಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಮಹಿಳೆ ರಂಜು ಎಂಬುವವರ ಮನೆಯ ಪಕ್ಕದಲ್ಲಿ ಸಮಾರಂಭವೊಂದು ನಡೆಯುತ್ತಿದ್ದು, ರಂಜು ಗರ್ಭಿಣಿಯಾಗಿದ್ದ ಕಾರಣ ಆ ಕರ್ಕಶ ಶಬ್ಧ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆಗ ಸಿಟ್ಟಿಗೆದ್ದ ಹರೀಶ್ ಎಂಬುವವರು ಪಿಸ್ತೂಲ್ನಿಂದ ಮಹಿಳೆ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ಗಂಟಲಿಗೆ ತಗುಲಿದ್ದು ನೆಲಕ್ಕೆ ಕುಸಿದುಬಿದ್ದಿದ್ದಾರೆ, ಪರಿಣಾಮ ಗರ್ಭಪಾತವಾಗಿದೆ. ಇಬ್ಬರ ವಿರುದ್ಧವೂ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.








