ಹೈದರಾಬಾದ್: ತೆಲಂಗಾಣ (Telangana Assembly Election) ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಹೀಗಾಗಿ ಅಲ್ಲಿ ಈಗ ಸಿಎಂ ಹಾಗೂ ಡಿಸಿಎಂ ರೇಸ್ ಪೈಪೋಟಿ ಮುಂದುವರೆಸಿದ್ದು, ಮುಲುಗು ಶಾಸಕಿ (Mulug Assembly Election) ಸೀತಕ್ಕ ಈಗ ರೇಸ್ ನಲ್ಲಿದ್ದಾರೆ.
ಕೋಯ ಬುಡಕಟ್ಟು ಜನಾಂಗಕ್ಕೆ ಸೇರಿದ ದಂಸಾರಿ ಅನಸೂಯಾ ಅಲಿಯಾಸ್ ಸೀತಕ್ಕ (Danasari Anasuya Seethakka) ಎರಡು ತೆಲುಗು ರಾಜ್ಯಗಳಲ್ಲಿ ಪರಿಚಿತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಜೀವನ ಆರಂಭಿಸಿದ ಅನಸೂಯಾ ನಕ್ಸಲ್ ಚಳವಳಿಗೆ ಸೇರಿ ಮಾವೋವಾದಿಗಳ ಜೊತೆಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು.
ಮುಲುಗು ವಿಧಾನಸಭಾ ಕ್ಷೇತ್ರದ ಶಾಸಕಿ, ಸೀತಕ್ಕ ಮಾಜಿ ನಕ್ಸಲೀಯ ನಾಯಕಿಯಾಗಿದ್ದು, ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಮಾವೋವಾದಿಯಾಗಿ ತಲೆಮರೆಸಿಕೊಂಡಿದ್ದರು. ಈಗ ಜಾಗೃತಿ ಮೂಡಿಸಲು ರಾಜಕೀಯ ಸೇರಿದ್ದಾರೆ.