Rajinikanth | ತಲೈವಾ ಸಿನಿಮಾದಲ್ಲಿ ಶಿವಕಾರ್ತಿಕೇಯನ್..
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಬೀಸ್ಟ್ ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರವೇ.
‘ಬೀಸ್ಟ್ ’ ಚಿತ್ರ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಈ ಸಿನಿಮಾವನ್ನೂ ನಿರ್ಮಿಸುತ್ತಿದೆ.
ಇದರ ನಡುವೆ ಈ ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದು ಕಾಲಿವುಡ್ ನಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಕಾಲಿವುಡ್ ಮೂಲಗಳ ಪ್ರಕಾರ. ಈ ಸಿನಿಮಾದಲ್ಲಿ ಯುವ ನಾಯಕ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರಂತೆ.
ಅವರು ಬೇರೆ ಯಾರೂ ಅಲ್ಲ ಕಾಲಿವುಡ್ ಹೀರೋ ಶಿವ ಕಾರ್ತಿಕೇಯನ್.

ಹಿಂದೆ ನೆಲ್ಸನ್ ದಿಲೀಪ್ ಕುಮಾರ್ ಅವರು ‘ಡಾಕ್ಟರ್’ ಚಿತ್ರದ ಮೂಲಕ ಕಾರ್ತಿಗೆ ಹಿಟ್ ನೀಡಿದ್ದರು.
ಈ ಸಿನಿಮಾ100 ಕೋಟಿ ಕ್ಲಬ್ ಸೇರಿತ್ತು. ಅಲ್ಲದೇ ಡಾಕ್ಟರ್ ಸಿನಿಮಾಗೆ ನಿರ್ಮಾಪಕರೂ ಶಿವಕಾರ್ತಿಕೇಯನ್.
ಹಾಗಾಗಿಯೇ ಮತ್ತೊಮ್ಮೆ ನೆಲ್ಸನ್ ಸಿನಿಮಾದಲ್ಲಿ ನಟಿಸಲು ಶಿವ ಕಾರ್ತಿಕೇಯನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬುದು ಕಾಲಿವುಡ್ ಟಾಕ್.
ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಬರುವ ಸಾಧ್ಯತೆ ಇದೆ. sivakarthikeyan-play-key-role-rajinikanth-movie