ಬ್ರಾಟಿಸ್ಲಾವಾ: ಸ್ಲೋವಾಕಿಯಾ(Slovak) ಪ್ರಧಾನಿ ರಾಬರ್ಟ್ ಫಿಕೊ (Robert Fico) ಮೇಲೆ ದುಷ್ಕರ್ಮಿಯೊಬ್ಬಾತ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.
ಸರ್ಕಾರದ ಕಾರ್ಯಕ್ರಮವೊಂದರ ನಂತರ ಪ್ರಧಾನಿ ರಾಬರ್ಟ್ ಫಿಕೊ ಹೊರ ಬರುತ್ತಿದ್ದಂತೆ ದುಷ್ಕರ್ಮಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪ್ರಧಾನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
TASR ಸಂಸತ್ತಿನ ಉಪಾಧ್ಯಕ್ಷ ಲುಬೋಸ್ ಬ್ಲಾಹಾ ಅವರು ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಫಿಕೊ ಅವರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಅಪರಿಚಿತನೊಬ್ಬ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ, ಆ ವ್ಯಕ್ತಿಯನ್ನು ಪೊಲೀಸರು ಕೂಡ ಬಂಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ. ಗುಂಡು ಬೀಳುತ್ತಿದ್ದಂತೆ ಪ್ರಧಾನಿ ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಣಾ ಸಿಬ್ಬಂದಿ ಕಾರಿನೊಳಗೆ ಕೂರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.