Smriti Mandhana: ಸ್ಮೃತಿ ಮಂಧಾನಗೆ `ICC ವರ್ಷದ ಆಟಗಾರ್ತಿ’ಯ ಗೌರವ!
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನಾ ಮುಕುಟಕ್ಕೆ ಮತ್ತೊಂದು ಗರಿ ಧಕ್ಕಿದೆ. smriti-mandhana-wins-womens-cricketer-year-2021 saaksha tv
ಸ್ಮೃತಿ ಮಂದಾನ ಅವರನ್ನು ವರ್ಷದ ಮಹಿಳಾ ಕ್ರಿಕೆಟರ್ ಅಂತ ಐಸಿಸಿ ಘೋಷಿಸಿದೆ. 2021ರಲ್ಲಿ ಮಹಿಳಾ ಕ್ರಿಕೆಟ್ ನಲ್ಲಿ ಸ್ಮೃತಿ ಸಾಧನೆ ಗುರುತಿಸಿ ಐಸಿಸಿ ಈ ಗೌರವ ನೀಡಿದೆ.
ಇತ್ತೀಚೆಗೆ ಭಾತರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನ ಟೀಂ ಇಂಡಿಯಾ 2 ಪಂದ್ಯಗಳನ್ನ ಗೆದ್ದುಕೊಂಡಿದೆ.
ಈ ಎರಡೂ ಗೆಲುವಿನಲ್ಲಿ ಸ್ಮೃತಿ ಪ್ರಮುಖ ಪಾತ್ರ ವಹಿಸಿದ್ದರು. ಎರಡನೇ ODIನಲ್ಲಿ 80 ರನ್ ಗಳಿಸಿ ಅಜೇಯರಾಗಿದ್ದರು ಮತ್ತು ಕೊನೆಯ T20 ಪಂದ್ಯದಲ್ಲಿ 48 ರನ್ ಗಳಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಭಾಗವಾಗಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ 86 ರನ್ ಗಳಿಸಿದ್ದರು.
ಕಾಂಗರೂಗಳ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಹಲವು ಪಂದ್ಯಗಳಲ್ಲಿ ಪ್ರಭಾವಿ ಇನ್ನಿಂಗ್ಸ್‌ಗಾಗಿ ಐಸಿಸಿ ಸ್ಮೃತಿ ಅವರನ್ನು ವರ್ಷದ ಕ್ರಿಕೆಟ್ ಆಟಗಾರ್ತಿ ಎಂದು ಗೌರವಿಸಿದೆ.
ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಟಾಮಿ ಬ್ಯೂಮಾಂಟ್ ಅವರು 2021 ರ ಐಸಿಸಿ ಮಹಿಳಾ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ.