ಯಲಹಂಕದ ಆಸ್ಪತ್ರೆಗೆ ಆಕ್ಸಿಜನ್ ಪೂರೈಸಿದ ರಿಯಲ್ ಹೀರೋ ಸೋನು ಸೂದ್…!

1 min read

ಯಲಹಂಕದ ಆಸ್ಪತ್ರೆಗೆ ಆಕ್ಸಿಜನ್ ಪೂರೈಸಿದ ರಿಯಲ್ ಹೀರೋ ಸೋನು ಸೂದ್…!

ಬೆಂಗಳೂರು : ಕೊರೊನಾ ಸಂಕಷ್ಟದಲ್ಲಿ ಜನರ ಪಾಲಿಗೆ ಆಪತ್ಬಾಂಧವನಂತೆ ಬಡವರ ನೆರವಿಗೆ ಧಾವಿಸಿರುವ ರಿಯಲ್ ಹೀರೋ ಸೋನು ಸೂದ್  ಅವರು ಜಾಗ ಯಾವುದೇ ಇರಲಿ,  ಯಾವುದನ್ನೂ ನೋಡದೇ ಎಲ್ಲರಿಗೂ ಸಹಾಯ ಮಾಡುವ ಸಹೃದಯಿ.. ಇದೀಗ ಸೋನು ಅವರು ಬೆಂಗಳೂರಿನ ಯಲಹಂಕದ ಅರ್ಕ ಆಸ್ಪತ್ರೆಗೆ ತುರ್ತಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಿ ಸುಮಾರು 15 ಕೋವಿಡ್ ರೋಗಿಗಳ ಜೀವ ಉಳಿಸಲು ನೆರವಾಗಿ ದೇವರಾಗಿದ್ಧಾರೆ.

ಬೆಂಗಳೂರಿನ ಯಲಹಂಕದ ನ್ಯೂ ಟೌನ್ ನಲ್ಲಿರುವ ಅರ್ಕ ಹಾಸ್ಪಿಟಲ್ ನಲ್ಲಿ ಎರಡು ದಿನದ ಹಿಂದೆ ಮಧ್ಯರಾತ್ರಿ 12.30 ಕ್ಕೆ ಆಕ್ಸಿಜನ್ ಖಾಲಿಯಾಗುತ್ತಾ ಬಂದಿತ್ತು. ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಅವಶ್ಯಕತೆ ಇತ್ತು. ಆಗ ಯಲಹಂಕ ನ್ಯೂ ಟೌನ್ ಪೊಲೀಸ್ ಸ್ಟೇಷನ್‌ನ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ನಟ ‘ಸೋನು ಸೂದ್ ಚಾರಿಟಬಲ್ ಟ್ರಸ್ಟ್’ ಸದಸ್ಯರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಕೂಡಲೇ ಸದಸ್ಯರು ತಡರಾತ್ರಿ 01.30 ಕ್ಕೆ ಬೈಕ್ ಹಾಗೂ ಕಾರುಗಳಲ್ಲಿ 11 ಆಕ್ಸಿಜನ್ ಸಿಲಿಂಡರ್ ಒದಗಿಸಿದರು. ಸೋನು ಸೂದ್ ಅವರು ತಮ್ಮ ಫೌಂಡೇಶನ್‌ ವತಿಯಿಂದ ದೇಶದಾದ್ಯಂತ ಲಕ್ಷಾಂತರ ಜನಕ್ಕೆ ಸಹಾಯ ಮಾಡುತ್ತಿದ್ದಾರೆ. ಆಮ್ಲಜನಕ ಸಿಲಿಂಡರ್ ವ್ಯವಸ್ಥೆ, ಪ್ಲಾಸ್ಮಾ ವ್ಯವಸ್ಥೆ, ಆಸ್ಪತ್ರೆ ಬೆಡ್ ವ್ಯವಸ್ಥೆ ಇನ್ನೂ ಹಲವು ಮಾದರಿಗಳಲ್ಲಿ ಸೋನು ಸೂದ್ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd