ಸೋಶೀಯಲ್ ಮೀಡಿಯಾ ಸ್ಟಾರ್ ಗಳೇ ಎಚ್ಚರ – ನಿಯಮ ಉಲ್ಲಂಘಿಸಿದರೆ 10 ಲಕ್ಷ ದಂಡ…
ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸೋಶಿಯಲ್ ಮೀಡಿಯಾ ಪ್ರಭಾವಿಗಳು (influencers) ಮತ್ತು ಸೆಲೆಬ್ರಿಟಿಗಳಿಗೆ ಮಾರ್ಗಸೂಚಿ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿಗಳಿಗೆ ಸರ್ಕಾರ ಶೀಘ್ರದಲ್ಲೇ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತದೆ. ಈ ನಿಬಂಧನೆಗಳು ಮೊದಲ ಬಾರಿಗೆ ಅಪರಾಧ ಮಾಡುವವರಿಗೆ 10 ಲಕ್ಷ ಗಳ ವರೆಗೆ ದಂಡವನ್ನ ಒಳಗೊಂಡಿರುತ್ತದೆ. ಪುನರಾವರ್ತಿತ ಅಪರಾಧಿಗಳಿಗೆ ದಂಡವನ್ನು 20 ರಿಂದ 50 ಲಕ್ಷಕ್ಕೆ ಹೆಚ್ಚಿಸಬಹುದು. ಇನ್ನು ಹತ್ತು ದಿನಗಳಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿ ಹೊರಡಿಸಲಿದೆ.
ಈ ನಿಯಮಗಳ ಅಡಿಯಲ್ಲಿ, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಬ್ರಾಂಡ್ ಪ್ರಚಾರಕ್ಕಾಗಿ ಪಡೆದ ಪೇಮೆಂಟ್ ಬಗ್ಗೆ ಬಹಿರಂಗಪಡಿಸುವುದು ಕಡ್ಡಾಯವಾಗಿರುತ್ತದೆ ಅಥವಾ ಅವರು ಪ್ರಚಾರ ಮಾಡುತ್ತಿರುವ ಉತ್ಪನ್ನ ಅಥವಾ ಸೇವೆಯ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಾರೆ.
ಸುಳ್ಳು ವಿಮರ್ಶೆಗಳನ್ನು ಬರೆಯುವುದು ಅಥವಾ ನಕಲಿ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದು ಅಥವಾ ಯಾವುದೇ ಬ್ರ್ಯಾಂಡ್ಗಳನ್ನ ಪ್ರಚಾರ ಮಾಡಲು ಸಾಕಷ್ಟು ತಪಾಸಣೆ ನಡೆಸದ ಪ್ರಭಾವಿಗಳ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.