ಸಾವೊ ಪಾಲೊ: ಕೋರ್ಟ್(Supreme Court) ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನ್ನು ಬ್ರೆಜಿಲ್ (Brazil) ನಲ್ಲಿ ಸ್ಥಗಿತಗೊಳಿಸಲಾಗಿದೆ.
ಎಲೋನ್ ಮಸ್ಕ್ (Elon Musk) ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ನ್ನು (X social network)ನ್ನು ಈಗ ಬ್ರೆಜಿಲ್ ನಲ್ಲಿ ಣಾನತು ಮಾಡಲಾಗಿದೆ. ಎಕ್ಸ್ನಲ್ಲಿ ಹಂಚಿಕೊಳ್ಳಲಾದ ತಪ್ಪು ಮಾಹಿತಿಯ ಪ್ರಕರಣವನ್ನು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಶುಕ್ರವಾರ ಅಮಾನತುಗೊಳಿಸುವಂತೆ ಆದೇಶಿಸಿದ್ದರು. ಕಂಪನಿಗೆ ಹೊಸ ಕಾನೂನು ಪ್ರತಿನಿಧಿಯನ್ನು ನೇಮಿಸುವ ಆದೇಶವನ್ನು ಅನುಸರಿಸಲು ಮಸ್ಕ್ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಆದೇಶಕ್ಕೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, ನ್ಯಾ.ಮೊರೆಸ್ ಅವರನ್ನು `ದುಷ್ಟ ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಅಲ್ಲದೇ ಬ್ರೆಜಿಲ್ನಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಬ್ರೆಜಿಲ್ ನಲ್ಲಿ ಹುಸಿ ನ್ಯಾಯಾಧೀಶರು ರಾಜಕೀಯ ಉದ್ದೇಶಗಳಿಗಾಗಿ ಅದನ್ನು ನಾಶಪಡಿಸುತ್ತಿದ್ದಾರೆ ಎಂದು ಮಸ್ಕ್ ಕಟುವಾಗಿ ಟೀಕಿಸಿದ್ದಾರೆ.
ನ್ಯಾಯಾಲಯ ಕೆಲ ವ್ಯಕ್ತಿಗಳ ಖಾತೆಯನ್ನು ಸೆನ್ಸಾರ್ಶಿಪ್ ಮಾಡುವಂತೆ ಆದೇಶಿಸಿತ್ತು. ಆದರೆ ಎಕ್ಸ್ ಸೆನ್ಸಾರ್ ಮಾಡಿರಲಿಲ್ಲ. ಹೀಗಾಗಿ ಈ ಪ್ರಕರಣ ಸುಪ್ರೀಂ ಮೆಟ್ಟಿಲು ಏರಿತ್ತು.