ಬೆಂಗಳೂರು: ನಾಳೆ ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾದ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಸಂಭವಿಸಲಿದ್ದು, ಕರ್ನಾಟಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಗೋಚರವಾಗಿದೆ.
ನಾಳೆ ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದ ಮಿಥುನರಾಶಿ, ಸಿಂಹ ಮತ್ತು ಕನ್ಯಾ ಲಗ್ನದಲ್ಲಿ ರಾಹುಗ್ರಸ್ಥ ಸೂರ್ಯಗ್ರಹಣ ಸಂಭವಿಸಲಿದೆ.
ಗ್ರಹಣವು ಭಾರತದಲ್ಲಿ ಕಾಣಿಸುವುದರಿಂದ ಗ್ರಹಣಾಚರಣೆ ಮಾಡಬೇಕು. ಜೂ.20ರ ಶನಿವಾರ ರಾತ್ರಿ 9 ಗಂಟೆ 35ನಿಮಿಷದವರೆಗೂ ಆಹಾರ ಸೇವಿಸಬಹುದು ಎನ್ನುತ್ತಾರೆ ತ್ರಿಪುರಾಂತಕೇಶ್ವರ ಜ್ಯೋತಿಷ್ಯಾಲಯದ ಜ್ಯೋತಿಷಿಗಾದ ಪ್ರಶಾಂತ್ ಭಟ್.
ಗ್ರಹಣ ಸಂಭವಿಸುವ ಸಮಯ
ಗ್ರಹಣ ಸ್ಪರ್ಷ ಕಾಲ: ಬೆಳಿಗ್ಗೆ 10 ಗಂಟೆ 13 ನಿಮಿಷ
ಗ್ರಹಣ ಮಧ್ಯಕಾಲ : ಬೆಳಿಗ್ಗೆ 11 ಗಂಟೆ 52 ನಿಮಿಷ
ಗ್ರಹಣ ಮೋಕ್ಷ ಕಾಲ: ಮಧ್ಯಾಹ್ನ 1 ಗಂಟೆ 32 ನಿಮಿಷ
ಗ್ರಹಣ ಶಾಂತಿ ವಿಚಾರ
ಮೃಗಶಿರ ಮತ್ತು ಆರಿದ್ರಾ ನಕ್ಷತ್ರದವರು, ವೃಷಭ ಮತ್ತು ಮಿಥುನ ರಾಶಿಯವರು, ಸಿಂಹ ಹಗೂ ಕನ್ಯಾ ಲಗ್ನದಲ್ಲಿ ಜನಿಸಿದವರು ಶ್ಲೋಕವನ್ನು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ಪಠನ ಮಾಡಬೇಕು. ಗ್ರಹಣ ದೋಷಮೋಕ್ಷ ನಂತರ ಯಥಾಶಕ್ತಿಗೆ ಅನುಸಾರವಾಗಿ ಕೆಂಪು ವಸ್ತ್ರ, ಗೋದಿ, ಒಂದು ಬಣ್ಣದ ವಸ್ತ್ರ, ಉದ್ದಿನ ಬೇಳೆ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ ಮತ್ತು ದಕ್ಷಿಣೆ ಸಮೇತ ದಾನ ಮಾಡಬೇಕು.
ಗ್ರಹಣ ವೇಳೆ ಶ್ಲೋಕ ಪಠನ
|| ಯೋ ಸೌ ವಜ್ರಧರೋದೇವಃ ಆದಿತ್ಯಾನಂ ಪ್ರಭುರ್ಮತಃ |
ಸೂರ್ಯಗ್ರಹೋಪಹಗೋತ್ಥಂ ಗ್ರಹಪೀಡಾಂ ವ್ಯಪೋಹತು |
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಗ್ರಹಣ ಕಾಲದಲ್ಲಿ ಈ ಶ್ಲೋಕವನ್ನು ಬರೆದಿಟ್ಟುಕೊಂಡು ಗ್ರಹಣ ಮುಗಿಯುವವರೆಗೂ ಓದಬಹುದು ಅಥವಾ 21 ಬಾರಿ ಓದಿ ಗ್ರಹಣದ ಮೋಕ್ಷ ನಂತರ ದಕ್ಷಿಣೆ ಸಮೇತ ಬ್ರಾಹ್ಮಣರಿಗೆ ದಾನ ಮಾಡಬೇಕು.
ಮತ್ತು ವಿಷ್ಣು ಸಹಸ್ರನಾಮವನ್ನು ಹೇಳಬಹುದು ಅಥವಾ ಆದಿತ್ಯ ಸ್ತ್ರೋತ್ರವನ್ನುಂ ಹೇಳಬಹುದು. ನಿಮ್ಮ ನಿಮ್ಮ ಕುಲದೇವರನ್ನು ಸ್ಮರಣೆ ಮಾಡುವುದು, ಭಜನೆ-ಜಪ-ಧ್ಯಾನ ಹಾಗೂ ಸದಾ ನಾರಾಯಣ ಸ್ಮರಣೆ ಮಾಡಬಹುದು ಎನ್ನುತ್ತಾರೆ ಜ್ಯೋತಿಷಿ ಪ್ರತಾಂಶ್ ಭಟ್.
ಪ್ರಶಾಂತ್ ಭಟ್ ಅವರನ್ನು ಸಂಪರ್ಕಿಸಲು ಇಚ್ಛಿಸುವವರು ದೂ.9449501528, 8105865466ಗೆ ಕರೆ ಮಾಡಬಹುದು.