ಕೊರೋನಾ ಎದುರಿಸಲು ವಯಸ್ಸಾದವರಿಗೆ ಕೆಲವೊಂದು ಸಲಹೆ
ಮಂಗಳೂರು, ಜೂನ್ 12: ಇಡೀ ವಿಶ್ವವನ್ನೇ ಕಾಡಿರುವ ಕೊರೊನಾ ಸೋಂಕು ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಹೆಮ್ಮಾರಿಯಾಗಿ ಕಾಡುತ್ತಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಸಮಯದವರೆಗೆ ಹತೋಟಿಯಲ್ಲಿಯೇ ಇದ್ದ ಕೊರೊನಾ ಸೋಂಕು ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ನಿಯಂತ್ರಿಸಲು ಸಾಧ್ಯವೇ ಆಗದಂತೆ ಸ್ಥಿತಿಗೆ ತಲುಪಿದೆ.
ಕೊರೋನಾ ಸೋಂಕಿನಿಂದ ಚಿಕ್ಕ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ಮತ್ತು ವಯಸ್ಸಾದವರಿಗೆ ಅಪಾಯ ಹೆಚ್ಚಿದ್ದು , ಸೋಂಕಿನಿಂದ ರಕ್ಷಿಸಿಕೊಳ್ಳಲು ಅವರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕಾದ ಅಗತ್ಯವಿದೆ. ಮನೆಯಿಂದ ಹೊರಗೆ ಬರದೇ ಇರುವುದು, ಬರಲೇ ಬೇಕಾದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಇಮ್ಯುನಿಟಿ ಹೆಚ್ಚಿಸಲು ಒಳ್ಳೆಯ ಅಂಶಗಳಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಕೊರೊನಾದಿಂದ ದೂರವಿರಬಹುದು.
ವಯಸ್ಸಾದವರ ಕಾಳಜಿ ಕೊರೊನಾದ ಈ ಸಮಯದಲ್ಲಿ ಅತೀ ಮುಖ್ಯವಾಗಿದ್ದು, ಅವರಿಗಾಗಿ ಕೆಲವೊಂದು ಸಲಹೆಗಳು ಇಲ್ಲಿವೆ.
1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್ ಫುಡ್ ಗಳನ್ನು ಸೇವಿಸಿ :
ವಯಸ್ಸಾದವರಿಗೆ ಸೂಪರ್ ಫುಡ್ ಗಳಾದ ಬ್ರೋಕಲಿ, ಮಶ್ರೂಮ್ ಗಳನ್ನು ಆಹಾರದ ಜೊತೆಗೆ ನೀಡುವುದರಿಂದ ಅದು ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೇಗವಾಗಿ ಹೆಚ್ಚಿಸುತ್ತದೆ. ಒಮೆಗಾ-3-ಫ್ಯಾಟಿ ಆಸಿಡ್ಸ್ ಹೆಚ್ಚಾಗಿ ಇರುವ ಬೀನ್ಸ್, ನಟ್ಸ್ ಗಳು ಕೂಡ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಆಮ್ಲಾ, ಸ್ಪಿರುಲಿನ ಕೂಡ ಇಮ್ಯುನಿಟಿ ಯನ್ನು ಬಹಳ ವೇಗವಾಗಿ ವೃದ್ಧಿಸುತ್ತದೆ.
2. ಆಗಾಗ್ಗೆ ಬಿಸಿ ನೀರು ಸೇವಿಸಿ : ದಿನಕ್ಕೆ ಕನಿಷ್ಠ 8-9 ಗ್ಲಾಸ್ ನಷ್ಟು ಬಿಸಿ ನೀರು ಸೇವಿಸಿ. ಬಿಸಿಯಾಗಿರುವ ನೀರನ್ನು ಆಗಾಗ್ಗೆ ಕುಡಿಯುವುದರಿಂದ ಒಳಚರ್ಮವು ತೇವವಾಗಿ ಇರುತ್ತದೆ ಮತ್ತು ಇದರಿಂದ ಶೀತ ಆಗುವುದು ಕಡಿಮೆಯಾಗುತ್ತದೆ. ವಯಸ್ಸಾದವರಿಗೆ ನೀರನ್ನು ಕುಡಿಯಲು ಇಷ್ಟ ಅವರಿಗೆ ಸೂಪ್, ಎಳನೀರು, ಟೀ ಗಳನ್ನು ಸೇವಿಸಲು ನೀಡಬಹುದು.
3. ವಿಟಮಿನ್ ಸಿ ಪದಾರ್ಥ : ಹಲವಾರು ರಿಸರ್ಚ್ ಗಳು ವಿಟಮಿನ್ ಸಿ ಹೊಂದಿರುವ ಪದಾರ್ಥಗಳು ಎಲ್ಲರಿಗೂ ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ತೋರಿಸಿದೆ.
ಕಿತ್ತಳೆ ಹಣ್ಣು, ಪಪ್ಪಾಯ, ಕಿವಿ ಮತ್ತು ಸೀಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚು ಇರುತ್ತದೆ. ತರಕಾರಿಗಳಾದ ಬದನೆಕಾಯಿ, ದೊಡ್ಡ ಮೆಣಸಿನಕಾಯಿ , ಬೀಟ್ ರೂಟ್, ಹೂ ಕೋಸು ಇವುಗಳಲ್ಲಿ ಕೂಡ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ.
4. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು
ಬೆಳ್ಳುಳ್ಳಿ, ಜೀರಿಗೆ, ಲೈಕೊರಸ್ ನಂತಹ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಕುಡಿಯುವ ಟೀ ಮತ್ತು ಆಹಾರದಲ್ಲಿ ಸೇರಿಸಿ ವಯಸ್ಸಾದವರಿಗೆ ಕೊಡಬಹುದು. ಇದರಿಂದ ಅವರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
5. ವಿಟಮಿನ್ ಇ ಪಧಾರ್ಥಗಳು : ವಿಟಮಿನ್ ಇ ಅಂಶಗಳನ್ನು ಹೊಂದಿರುವ ಪದಾರ್ಥಗಳು ಹಿರಿಯರ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ವಿಟಮಿನ್ ಇ ಪದಾರ್ಥಗಳು ಆಂಟಿ ಆಕ್ಸಿಡಂಟ್ ಆಗಿರುವುದರಿಂದ ಇನ್ಫೆಕ್ಷನ್ , ಬ್ಯಾಕ್ಟೀರಿಯಾ ಮತ್ತು ವೈರಸ್ ನಂತಹ ತೊಂದರೆಗಳನ್ನು ತಡೆಗಟ್ಟುತ್ತದೆ. ಬಾದಾಮಿ, ಸೂರ್ಯಕಾಂತಿ ಬೀಜ ಮತ್ತು ಪೀನಟ್ ಬಟರ್ ಮುಂತಾದ ಆಹಾರಗಳಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ.