ಮೈಸೂರು: ಮಹಾಮಾರಿ ಕೊರೊನಾ ರಾಜ್ಯದಲ್ಲಿ ರುದ್ರನರ್ತನ ಮುಂದುವರೆದಿದೆ. ಸಾವಿರಕ್ಕೂ ಜನರ ಉಸಿರು ನಿಲ್ಲಿಸಿದ ಹೆಮ್ಮಾರಿ, ಮೈಸೂರಿನಲ್ಲಿ ತಂದೆ-ಮಗನನ್ನು ಬಲಿ ಪಡೆದುಕೊಂಡಿದೆ.
ಮೈಸೂರಿನಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಇಂದು ಕೊರೊನಾದಿಂದ ಮೃತಪಟ್ಟಿದ್ದಾರೆ. ಸಹಾಯಕ ನಿರ್ದೇಶಕರ ಮನೆಯ ಐವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಎಇ, ಎಇ ಪತ್ನಿ ಹಾಗೂ ಮೂವರು ಮಕ್ಕಳಿಗೂ ಕೊರೊನಾ ಹೆಮ್ಮಾರಿ ತಗುಲಿತ್ತು.
ನಾಲ್ಕು ದಿನಗಳ ಹಿಂದೆ ಸಹಾಯಕ ನಿರ್ದೇಶಕ ಪುತ್ರ ಕೊರೊನಾಗೆ ಬಲಿಯಾಗಿದ್ದ. ಈ ದುಃಖದಿಂದ ಕುಟುಂಬವರು ಹೊರ ಬರುವ ಮುನ್ನವೇ ಇಂದು ಬೆಳಿಗ್ಗೆ ಎಂಜಿನಿಯರ್ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಹೀಗಾಗಿ ಉಳಿದ ಕುಟುಂಬದ ಮೂವರು ಸದಸ್ಯರಲ್ಲಿ ಆತಂಕ ಹೆಚ್ಚಿಸಿದೆ.
ಲಾಕ್‍ಡೌನ್ ವೇಳೆ ಯಾವುದೇ ಕೊರೊನಾ ಸೋಂಕಿತರು ಇಲ್ಲದೆ ಝೀರೋ ಕೇಸ್‍ನೊಂದಿಗೆ ಗ್ರೀನ್ ಝೋನ್‍ನಲ್ಲಿತ್ತು. ಆದರೆ, ಲಾಕ್‍ಡೌನ್ ತೆರವು ಮಾಡುತ್ತಿದ್ದಂತೆ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಜನರು ಮೈಸೂರಿಗೆ ಬಂದ ಹಿನ್ನೆಲೆಯಲ್ಲಿ ಮೈಸೂರು ಕೊರೊನಾ ಅಟ್ಟಹಾಸ ತತ್ತರಿಸಿ ಹೋಗಿದೆ. ನಿನ್ನೆ ಒಂದೇ ದಿನ 93 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1413ಕ್ಕೇ ಏರಿಕೆಯಾಗಿದೆ. ನಿನ್ನೆ ಹೆಮ್ಮಾರಿಗೆ ಬರೋಬ್ಬರಿ 7 ಮಂದಿ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಮೈಸೂರು ಜಿಲ್ಲೆಯೊಂದರಲೆಏ 57ಕ್ಕೆ ಏರಿಕೆಯಾಗಿದೆ.
ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...








